ನವದೆಹಲಿ: ಸುಮಾರು ಎರಡು ದಶಕದಲ್ಲಿ ಇದೇ ಮೊದಲ ಬಾರಿಗೆ ಚುನಾವಣಾ ಆಯೋಗವು ಉಪಚುನಾವಣೆಗೆ ಮತದಾರ ಪಟ್ಟಿಯನ್ನು ಪರಿಷ್ಕರಿಸಿದೆ. ಐದು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಚುನಾವಣೆ ಪ್ರಕ್ರಿಯೆ ನಡೆಸಲು ಆಯೋಗವು ಮತದಾರರ ಪಟ್ಟಿಯನ್ನು ಪರಿಷ್ಕರಿಸಿದೆ.
.4 ರಾಜ್ಯಗಳ 5 ವಿಧಾನಸಭಾ ಸ್ಥಾನಗಳಿಗೆ ಜೂನ್ 19ಕ್ಕೆ ಉಪಚುನಾವಣೆ, 23ಕ್ಕೆ ಫಲಿತಾಂಶ.
ಈ ಹಿಂದೆ 2006ರಲ್ಲಿ ತಮಿಳುನಾಡಿನಲ್ಲಿ ನಡೆದ ಉಪಚುನಾವಣೆ ವೇಳೆ ಮತದಾರರ ಪಟ್ಟಿಯನ್ನು ಪರಿಷ್ಕರಿಸಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

1950ರ ಜನಪ್ರತಿನಿಧಿ ಕಾಯ್ದೆಯಲ್ಲಿರುವಂತೆ, ಚುನಾವಣಾ ಆಯೋಗ ನಿರ್ದೇಶಿಸಿದರೆ ಪ್ರತಿ ಚುನಾವಣೆ ಹಾಗೂ ಉಪಚುನಾವಣೆ ವೇಳೆ ಮತದಾರರ ಪಟ್ಟಿಯನ್ನು ಪರಿಷ್ಕರಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ವೇಳೆ ಮತದಾರರ ಪಟ್ಟಿ ಪರಿಷ್ಕಣೆಯಾಗದಿದ್ದರೆ, ಅದರ ಮಾನ್ಯತೆಗೆ ಯಾವುದೇ ಭಂಗವಿಲ್ಲ. ಹಾಲಿ ಮತದಾರರ ಪಟ್ಟಿಯ ಮಾನ್ಯತೆ ಪರಿಷ್ಕೃತ ಆವೃತ್ತಿ ತಯಾರಾಗುವವರೆಗೆ ಇರುತ್ತದೆ ಎಂದು ಕಾನೂನನ್ನು ಉಲ್ಲೇಖಿಸಿ ಅವರು ಹೇಳಿದ್ದಾರೆ.
.ಪಕ್ಷಾಂತರ ಮಾಡಿದರೂ ಉಪಚುನಾವಣೆ ನಡೆಯದು: ತೆಲಂಗಾಣ CM ಮಾತಿಗೆ ‘ಸುಪ್ರೀಂ’ ಕಿಡಿ.
ಮತದಾರರ ಪಟ್ಟಿಯನ್ನು ಪರಿಷ್ಕರಿಸಬೇಕೋ ಬೇಡವೋ ಎನ್ನುವ ನಿರ್ಧಾರ ಚುನಾವಣಾ ಆಯೋಗಕ್ಕೆ ಬಿಟ್ಟಿದ್ದು, ಅಗತ್ಯಕ್ಕನುಗುಣವಾಗಿ ಅದು ನಿರ್ಧರಿಸುತ್ತದೆ.

ಗುಜರಾತ್ನ ಎರಡು ವಿಧಾನಸಭಾ ಕ್ಷೇತ್ರಗಳಿಗೆ, ಕೇರಳ, ಪಶ್ಚಿಮ ಬಂಗಾಳ ಹಾಗೂ ಪಂಜಾಬ್ನ ಒಂದು ಕ್ಷೇತ್ರ ಸೇರಿ ಒಟ್ಟು 5 ಕ್ಷೇತ್ರಗಳಿಗೆ ಕಳೆದ ತಿಂಗಳು ಉಪಚುನಾವಣೆ ಘೋಷಣೆಯಾಗಿತ್ತು. ಜೂನ್19ರಂದು ಮತದಾನ ನಡೆಯಲಿದ್ದು, ಜೂನ್ 23ಕ್ಕೆ ಮತ ಎಣಿಕೆ ನಡೆಯಲಿದೆ.
.27 ಗ್ರಾಮ ಪಂಚಾಯಿತಿ ಉಪಚುನಾವಣೆ: 19 ಕಡೆ ಕಾಂಗ್ರೆಸ್ ಬೆಂಬಲಿತರ ಗೆಲುವು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.