ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎಸ್ಸಿಯ ಆ ಒಂದೇ ರ‍್ಯಾಂಕ್‌ ಅನ್ನು ತಮ್ಮದೆಂದು ಹೇಳಿಕೊಂಡ ಇಬ್ಬರು!

ಯುಪಿಎಸ್ಸಿ ಕಳೆದ ಮಂಗಳವಾರ ನಾಗರಿಕ ಸೇವಾ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಿತ್ತು
Published 26 ಮೇ 2023, 15:56 IST
Last Updated 26 ಮೇ 2023, 15:56 IST
ಅಕ್ಷರ ಗಾತ್ರ

ನವದೆಹಲಿ: ಕಳೆದ ಮಂಗಳವಾರ ಪ್ರಕಟಗೊಂಡ ಯುಪಿಎಸ್ಸಿ ಪರೀಕ್ಷೆ ಫಲಿತಾಂಶದಲ್ಲಿ 44 ನೇ (ಆಲ್ ಇಂಡಿಯಾ) ರ‍್ಯಾಂಕ್‌ ಅನ್ನು ತಮ್ಮದು ಎಂದು ಇಬ್ಬರು ಹೇಳಿಕೊಂಡಿರುವುದಾಗಿ ವರದಿಯಾಗಿದೆ.

ಹೌದು, ತುಷಾರ್ ಕುಮಾರ್ ಎಂಬ ಹೆಸರಿನ ಇಬ್ಬರು ಈ ಕ್ಲೈಮ್ ಅನ್ನು ಮಾಡಿದ್ದಾರೆ. ಒಬ್ಬರು ಬಿಹಾರದವರಾದರೆ, ಇನ್ನೊಬ್ಬರು ಹರಿಯಾಣದವರು. ಈ ಇಬ್ಬರೂ ಕೂಡ ಸಂದರ್ಶನ ಎದುರಿಸಿದ್ದರು. ಇಬ್ಬರದೂ ಒಂದೇ ರೋಲ್ ನಂಬರ್, ಒಂದೇ ಹೆಸರು ಆಗಿತ್ತು.

ಇದೀಗ 44ನೇ ರ‍್ಯಾಂಕ್‌ ಗೊಂದಲ ಮೂಡಿಸಿದ್ದು ಇಬ್ಬರೂ ಯುಪಿಎಸ್ಸಿಗೆ ಅಹವಾಲು ಸಲ್ಲಿಸಿದ್ದು ಗೊಂದಲ ಬಗೆಹರಿಸುವಂತೆ ಕೇಳಿಕೊಂಡಿದ್ದಾರೆ. ಈ ಇಬ್ಬರೂ ‘44ನೇ ರ್ಯಾಂಕ್ ಬಂದಿರೋದು ನಾನು, ಅವನಲ್ಲ’ ಎಂದು ಸ್ಥಳೀಯ ಮಾಧ್ಯಮಗಳ ಎದುರು ಹೇಳಿಕೊಂಡಿದ್ದು, ದೂರು ನೀಡುವುದಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT