ಚೆನ್ನೈ: ಜಾತಿಯೇ ತಮ್ಮ 'ದೊಡ್ಡ' ರಾಜಕೀಯ ಪ್ರತಿಸ್ಪರ್ಧಿ ಎಂದು ಬಹುಭಾಷಾ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಭಾನುವಾರ ಹೇಳಿದ್ದಾರೆ.

ಮಕ್ಕಳ್ ನೀದಿ ಮೈಯಂ ಪಕ್ಷದ ಅಧ್ಯಕ್ಷ ಕಮಲ್ ಹಾಸನ್, ಇಲ್ಲಿನ "ನೀಲಂ ಬುಕ್ಸ್" ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದರು.

‘ನನ್ನ ದೊಡ್ಡ ಪ್ರತಿಸ್ಪರ್ಧಿ ಹಾಗೂ ರಾಜಕೀಯ ಪ್ರತಿಸ್ಪರ್ಧಿ ಎರಡೂ ಜಾತಿಯೇ ಆಗಿದೆ. ನಾನು 21 ವರ್ಷ ವಯಸ್ಸಿನಿಂದಲೂ ಇದನ್ನು ಹೇಳುತ್ತಿದ್ದೇನೆ. ನಾನು ಈಗಲೂ ಹೇಳುತ್ತಿದ್ದೇನೆ, ನನ್ನ ಅಭಿಪ್ರಾಯವು ಎಂದಿಗೂ ಬದಲಾಗಿಲ್ಲ’ ಎಂದು ಕಮಲ್ ಹೇಳಿದ್ದಾರೆ.

‘ಚಕ್ರದ ನಂತರ ಮಾನವ ಮಾಡಿದ ಅತಿದೊಡ್ಡ ಆವಿಷ್ಕಾರ ದೇವರು. ಆದರೆ, ನಮ್ಮದೇ ಸೃಷ್ಟಿಯು ಒಂದು ವೇಳೆ ನಮ್ಮ ಮೇಲೆಯೇ ದಾಳಿ ಮಾಡಿದರೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ತಿಳಿಸಿದ್ದಾರೆ.

ನಿರ್ದೇಶಕ ರಂಜಿತ್ ಅವರು ಮಾತನಾಡಿ, ನೀಲಂ ಪುಸ್ತಕ ಮಳಿಗೆಯನ್ನು ಸ್ಥಾಪಿಸಿದ ಉದ್ದೇಶ ರಾಜಕೀಯವನ್ನು ಅರ್ಥಮಾಡಿಕೊಳ್ಳುವ ಪುಸ್ತಕಗಳನ್ನು ಹೊರತರುವುದಾಗಿದೆ ಎಂದು ಹೇಳಿದ್ದಾರೆ.

ಇವನ್ನೂ ಓದಿ: ಅದಾನಿ ಪ್ರಕರಣ: ತನಿಖೆಗೆ ಒತ್ತಾಯಿಸಿ ಬಿಜೆಪಿ ಕಚೇರಿ ಎದುರು ಎಎಪಿ ಪ್ರತಿಭಟನೆ

ಕಾಶ್ಮೀರದ ಜನತೆಗೆ ಪ್ರೀತಿ ಬೇಕಿದೆ- ಸಿಕ್ಕಿದ್ದೇನು? ಬಿಜೆಪಿಯ ಬುಲ್ಡೋಜರ್: ರಾಹುಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.