ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೊಟೊಮ್ಯಾಕ್ ಮಾಲೀಕರಿಂದ ₹36.84 ಕೋಟಿ ವಂಚನೆ: ಸಿಬಿಐ ಎಫ್ಐಆರ್

Last Updated 28 ಫೆಬ್ರುವರಿ 2020, 7:08 IST
ಅಕ್ಷರ ಗಾತ್ರ

ಲಖನೌ (ಉತ್ತರ ಪ್ರದೇಶ): ರೊಟೊಮ್ಯಾಕ್ ಪೆನ್ನು, ಲೇಖನ ಸಾಮಗ್ರಿಗಳು, ರಿಯಲ್ ಎಸ್ಟೇಟ್ ಸೇರಿದಂತೆ ಹಲವು ಬಗೆಯ ವ್ಯಾಪಾರ ವಹಿವಾಟು ಹೊಂದಿದ್ದ ಪ್ರಸಿದ್ಧ ರೊಟೊಮ್ಯಾಕ್ ಪ್ರೈವೇಟ್ ಕಂಪನಿ ಮಾಲೀಕರ ವಿರುದ್ಧ ಸಿಬಿಐ ಎಫ್ ಐಆರ್ ದಾಖಲಿಸಿದೆ.

ಕಂಪನಿಯ ಮಾಲೀಕರಾದ ವಿಕ್ರಮ್ ಕೊಠಾರಿ, ಪುತ್ರ ರಾಹುಲ್ ಕೊಠಾರಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇವರು ಲಖನೌ ಅಲಹಾಬಾದ್ ಬ್ಯಾಂಕ್‌‌ಗೆ ₹36.84 ಕೋಟಿ ವಂಚಿಸಿರುವುದಾಗಿ ಆರೋಪಿಸಿರುವ ಸಿಬಿಐನ ಉತ್ತರಪ್ರದೇಶದ ಭ್ರಷ್ಟಾಚಾರ
ನಿಗ್ರಹ ದಳದ ಅಧಿಕಾರಿಗಳು ಎಫ್ ಐಆರ್ ದಾಖಲಿಸಿದ್ದಾರೆ. ತನಿಖೆ ಮುಂದುವರಿದಿದೆ.

ರೊಟೊಮ್ಯಾಕ್ ಕೇಂದ್ರ ಕಚೇರಿ ಕಾನ್ಪುರದಲ್ಲಿದ್ದು, ಅಲ್ಲಿನ ಅಲಹಾಬಾದ್ ಬ್ಯಾಂಕ್‌‌ನಿಂದ ಹಣ ಪಡೆದು ವಂಚಿಸಿರುವುದಾಗಿ ದೂರು ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT