ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

CBSE Results | ದೆಹಲಿ ಸರ್ಕಾರಿ ಶಾಲೆಗಳ ಸಾಧನೆಗೆ ಸಿಎಂ ಕೇಜ್ರಿವಾಲ್ ಹರ್ಷ

Published 13 ಮೇ 2024, 11:17 IST
Last Updated 13 ಮೇ 2024, 11:17 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರೀಯ ಶಾಲಾ ಪರೀಕ್ಷಾ ಮಂಡಳಿಯ (ಸಿಬಿಎಸ್‌ಇ) 2024ನೇ ಸಾಲಿನ 12ನೇ ತರಗತಿ ಪರೀಕ್ಷೆಯಲ್ಲಿ ದೆಹಲಿ ಸರ್ಕಾರಿ ಶಾಲೆಗಳು ಅತ್ಯುತ್ತಮ ಫಲಿತಾಂಶದ ಸಾಧನೆ ಮಾಡಿವೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ತಿಳಿಸಿದ್ದಾರೆ.

ಸಿಬಿಎಸ್‌ಇ ಇಂದು ಫಲಿತಾಂಶ ಪ್ರಕಟಿಸಿದೆ. ದೇಶದಾದ್ಯಂತ ಪರೀಕ್ಷೆಗೆ ಹಾಜರಾಗಿದ್ದವರ ಪೈಕಿ ಶೇ 87.98 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಫಲಿತಾಂಶದ ಕುರಿತು ಟ್ವೀಟ್‌ ಮಾಡಿರುವ ಕೇಜ್ರಿವಾಲ್‌, 'ದೆಹಲಿ ಸರ್ಕಾರಿ ಶಾಲೆಗಳು, 12ನೇ ತರಗತಿ ಸಿಬಿಎಸ್‌ಸಿ ಪರೀಕ್ಷೆಯಲ್ಲಿ ಶೇ 96.99 ಫಲಿತಾಂಶ ಪಡೆದುಕೊಂಡಿವೆ. ಇದರೊಂದಿಗೆ ಕಳೆದ ವರ್ಷದ ನಮ್ಮದೇ ದಾಖಲೆಯನ್ನು ಮೀರಿರುವುದಲ್ಲದೆ, ರಾಷ್ಟ್ರೀಯ ಸರಾಸರಿಯನ್ನೂ ಹಿಂದಿಕ್ಕಿವೆ' ಎಂದು ಹರ್ಷಿಸಿದ್ದಾರೆ.

'ದೆಹಲಿ ಸರ್ಕಾರಿ ಶಾಲೆಗಳು 2022–23ನೇ ಸಾಲಿನಲ್ಲಿ ಶೇ 91.59 ರಷ್ಟು ಫಲಿತಾಂಶ ದಾಖಲಿಸಿದ್ದವು. 2023–24ನೇ ಸಾಲಿನಲ್ಲಿ ಶೇ 96.99 ರಷ್ಟು ಸಾಧನೆ ತೋರಿವೆ. ಸಿಬಿಎಸ್‌ಸಿ ಫಲಿತಾಂಶದ ರಾಷ್ಟ್ರೀಯ ಸರಾಸರಿ ಶೇ 87.98 ರಷ್ಟಿದ್ದರೆ, ದೆಹಲಿ ಶಾಲೆಗಳು ಶೇ 96.99 ರಷ್ಟು ಫಲಿತಾಂಶ ಪಡೆದಿವೆ' ಎಂದು ಅಂಕಿ–ಅಂಶ ಸಹಿತ ವಿವರ ನೀಡಿದ್ದಾರೆ.

'ಇಂತಹ ಅದ್ಭುತ ಫಲಿತಾಂಶ ದಾಖಲಿಸಿದ್ದಕ್ಕಾಗಿ, ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಹಾಗೂ ಇಡೀ ಶಿಕ್ಷಣೆ ಇಲಾಖೆಗೆ ಅಭಿನಂದನೆಗಳು' ಎಂದೂ ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT