ನವದೆಹಲಿ: 12ನೇ ತರಗತಿಯ ವಿದ್ಯಾರ್ಥಿಗಳ ಆಂತರಿಕ ಮತ್ತು ಪ್ರಾಯೋಗಿಕ ಮೌಲ್ಯಮಾಪನವನ್ನು ಜೂನ್ 28ರೊಳಗೆ ಪೂರ್ಣಗೊಳಿಸಲು ಕೇಂದ್ರೀಯ ಪ್ರೌಢಶಾಲಾ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಸೋಮವಾರ ಶಾಲೆಗಳಿಗೆ ಸೂಚಿಸಿದೆ.

ಸಿಬಿಎಸ್‌ಇ ಈಗ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಮಂಡಳಿಯ ಪರೀಕ್ಷೆಗಳನ್ನು ರದ್ದುಗೊಳಿಸಿದ ನಂತರ 12ನೇ ತರಗತಿ ಫಲಿತಾಂಶಗಳನ್ನು ಘೋಷಿಸಲು ಸಾಂದರ್ಭಿಕ ಮಾನದಂಡಗಳನ್ನು ಅನುಸರಿಸಲಿದೆ.

‘ಬಾಕಿ ಉಳಿದಿರುವ ಪ್ರಾಯೋಗಿಕ/ ಆಂತರಿಕ ಮೌಲ್ಯಮಾಪನಗಳನ್ನು ಈಗ ಆನ್‌ಲೈನ್‌ನಲ್ಲಿ ಮಾತ್ರ ನಡೆಸಲು ಅನುಮತಿ ಇದೆ. ಆಗಸ್ಟ್ 28ರೊಳಗೆ ಅಂಕಗಳನ್ನು ಒದಗಿಸಿರುವ ಲಿಂಕ್ ಮೂಲಕ ಅಪ್‌ಲೋಡ್ ಮಾಡಲು ಅನುಮತಿಸಲಾಗಿದೆ ಎಂದು’ ಸಿಬಿಎಸ್‌ಇ ಪರೀಕ್ಷೆಗಳ ನಿಯಂತ್ರಕ ಸನ್ಯಮ್ ಭಾರದ್ವಜ್ ಅವರು ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಆಂತರಿಕ ಮೌಲ್ಯಮಾಪನಕ್ಕಾಗಿ, ಸಿಬಿಎಸ್‌ಇ ನೀಡಿರುವ ಸೂಚನೆಗಳ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಪರೀಕ್ಷಿಸಲು ಸಂಬಂಧಪಟ್ಟ ವಿಷಯಗಳ ಶಿಕ್ಷಕರಿಗೆ ಸೂಚಿಸಲಾಗಿದೆ. ಖಾಸಗಿ ಅಭ್ಯರ್ಥಿಗಳಿಗೆ ಇಂತಹ ಮೌಲ್ಯಮಾಪನಗಳನ್ನು ನಡೆಸುವ ನೀತಿಯನ್ನು ಶೀಘ್ರದಲ್ಲೇ ರೂಪಿಸಲಾಗುವುದು ಎಂದು ಭಾರದ್ವಾಜ್ ಹೇಳಿದ್ದಾರೆ.

ಸಿಬಿಎಸ್ಇ ಬಾಹ್ಯ ಪರೀಕ್ಷಕರನ್ನು ನೇಮಿಸಿದ್ದು, ಅವರು ಪ್ರಾಯೋಗಿಕ ಪರೀಕ್ಷೆ ಮತ್ತು ಆಂತರಿಕ ಮೌಲ್ಯಮಾಪನಕ್ಕೆ ದಿನಾಂಕ ನಿಗದಿಪಡಿಸಿ, ಆನ್‌ಲೈನ್ ಮೂಲಕ ಧ್ವನಿ ಸಂದರ್ಶನ ನಡೆಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.