ಬೆಂಗಳೂರು: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) 2024–25ನೇ ಸಾಲಿನ ಫಲಿತಾಂಶ ಪ್ರಕಟವಾಗಿದ್ದು, ಕರ್ನಾಟಕದಲ್ಲಿ ಪರೀಕ್ಷೆ ಬರೆದಿದ್ದ 10ನೇ ತರಗತಿಯ ಶೇ 98.71 ಹಾಗೂ 12ನೇ ತರಗತಿಯ ಶೇ 95.95 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಬೆಂಗಳೂರು ಪ್ರದೇಶದ (ಕರ್ನಾಟಕ) ವಿದ್ಯಾರ್ಥಿಗಳ ಸಾಧನೆ ಕುಸಿದಿದೆ. 12ನೇ ತರಗತಿಯ ಪರೀಕ್ಷೆಗಳಲ್ಲಿ 2023–24ರಲ್ಲಿ ಶೇ 96.95, 2022–23ರಲ್ಲಿ ಶೇ 98.64 ಫಲಿತಾಂಶ ಬಂದಿತ್ತು. 10ನೇ ತರಗತಿಯಲ್ಲಿ 2023–24ರಲ್ಲಿ ಶೇ 99.26 ಹಾಗೂ 2022–23ರಲ್ಲಿ ಶೇ 99.18 ಫಲಿತಾಂಶ ಲಭಿಸಿತ್ತು.

ಬಾಲಕಿಯರೇ ಮೇಲುಗೈ: ಈ ಬಾರಿಯೂ 10 ಮತ್ತು 12ನೇ ತರಗತಿಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. 10ನೇ ತರಗತಿಯಲ್ಲಿ 93,148 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 50,236 ಬಾಲಕರಲ್ಲಿ ಶೇ 98.43 ಮತ್ತು 42,912 ಬಾಲಕಿಯರಲ್ಲಿ ಶೇ 99.46ರಷ್ಟು ಉತ್ತೀರ್ಣರಾಗಿದ್ದಾರೆ.

12ನೇ ತರಗತಿಯಲ್ಲಿ 21,745 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 11,767 ಬಾಲಕರಲ್ಲಿ ಶೇ 95.14 ಹಾಗೂ 9,978 ಬಾಲಕಿಯರಲ್ಲಿ ಶೇ 96.90ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಬೆಂಗಳೂರು ಶಾಲೆಗಳ ಸಾಧನೆ: ಬೆಂಗಳೂರಿನ ಹಲವು ಶಾಲೆಗಳು ಶೇ 100 ಫಲಿತಾಂಶ ಪಡೆದಿವೆ.

ಮಲ್ಲಸಂದ್ರದ ಶ್ರೀ ಕುಮಾರನ್ಸ್ ಚಿಲ್ಡ್ರನ್ಸ್ ಹೋಂ ಶೇ 100 ಫಲಿತಾಂಶ ಪಡೆದಿದ್ದು, ಅನುಷ್ಕಾ ಟೋನಪಿ 10ನೇ ತರಗತಿಯಲ್ಲಿ 500ಕ್ಕೆ 495 ಅಂಕ ಗಳಿಸಿದ್ದಾಳೆ. 12ನೇ ತರಗತಿಯ ವಾಣಿಜ್ಯ ವಿಭಾಗದಲ್ಲಿ ಸಮರ್ಥ್ ಜುಂಜುನ್ವಾಲಾ 500ಕ್ಕೆ 498 ಮತ್ತು ಮಾನವಿಕ ವಿಭಾಗದಲ್ಲಿ ಎಸ್. ಪ್ರಕೃತಿ 500ಕ್ಕೆ 495 ಅಂಕ ಗಳಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಪ್ರಾಂಜಲ್ ಪ್ರಣಯ್ ಜೋಶಿ 500 ಕ್ಕೆ 493 ಅಂಕಗಳನ್ನು ಗಳಿಸಿದ್ದಾರೆ.

ದೆಹಲಿ ಪಬ್ಲಿಕ್ ಸ್ಕೂಲ್ನ 450 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 12ನೇ ತರಗತಿಯ ಮಾನವಿಕ ವಿಭಾಗದಲ್ಲಿ ಹೃತಿಕಾ ಕಿರಣ್ ಶೆಟ್ಟಿ 500ಕ್ಕೆ 496 ಮತ್ತು ವಾಣಿಜ್ಯ ವಿಭಾಗದಲ್ಲಿ ಯಾದ್ವಿ ಬನ್ಸಾಲ್ 500ಕ್ಕೆ 492 ಅಂಕ ಗಳಿಸಿದ್ದಾರೆ.

ನಾರಾಯಣ ಗ್ರೂಪ್ನ ನಾರಾಯಣ ಒಲಿಂಪಿಯಾಡ್ ಶಾಲೆ ವಿದ್ಯಾರ್ಥಿಗಳಾದ ಅದ್ವಿಕಾ ಪೊತ್ಲೂರಿ ಮತ್ತು ಎಸ್. ಪ್ರಣವ್ ಎಸ್. ನಾಯರ್ 10ನೇ ತರಗತಿಯಲ್ಲಿ 500ರಲ್ಲಿ 493 (ಶೇ 98.6) ಅಂಕ ಗಳಿಸಿದ್ದಾರೆ.

12ನೇ ತರಗತಿಯಲ್ಲಿ ಸಹಕಾರ ನಗರ ಕ್ಯಾಂಪಸ್ ವಿದ್ಯಾರ್ಥಿ ರೇಯಾನ್ಷ್ ದೇವ್ನಾನಿ, ಕಸ್ತೂರಿನಗರ ಕ್ಯಾಂಪಸ್ನ ಎಸ್. ವೈಖಿನ್ 500ಕ್ಕೆ 495 (ಶೇ 99) ಅಂಕ ಗಳಿಸಿದ್ದಾರೆ.
.ಇನ್ಮುಂದೆ ಸಿಬಿಎಸ್ಇ 10ನೇ ತರಗತಿಗೆ ವರ್ಷದಲ್ಲಿ 2 ಬಾರಿ ಪರೀಕ್ಷೆ!.ವರ್ಷಕ್ಕೆ ಎರಡು ಸಿಬಿಎಸ್ಇ ಬೋರ್ಡ್ ಪರೀಕ್ಷೆ: ಸಮಾಲೋಚನೆಗೆ ನಿರ್ಧಾರ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.