ಹೈದರಾಬಾದ್: ‘45 ಲಕ್ಷ ಡೋಸ್ ಕೋವ್ಯಾಕ್ಸಿನ್ ಲಸಿಕೆ ಪೂರೈಸುವಂತೆ ಕೇಂದ್ರ ಸರ್ಕಾರ ಭಾರತ್ ಬಯೋಟೆಕ್ ಕೆಂಪನಿಗೆ ಪತ್ರ ಬರೆದಿದೆ‘ ಎಂದು ಮೂಲಗಳು ತಿಳಿಸಿವೆ.

ಈ 45 ಲಕ್ಷ ಡೋಸ್ ಲಸಿಕೆಯಲ್ಲಿ, 8 ಲಕ್ಷ ಡೋಸ್ ಅನ್ನು ಮಾರಿಷಸ್, ಫಿಲಿಪ್ಪೀನ್ಸ್ ಮತ್ತು ಮ್ಯಾನ್ಮಾರ್ಗಳಂತಹ ಸ್ನೇಹಪರ ರಾಷ್ಟ್ರಗಳಿಗೆ ಸದ್ಬಾವನೆಯ ಉದ್ದೇಶದೊಂದಿಗೆ ಉಚಿತವಾಗಿ ಸರಬರಾಜು ಮಾಡಲಾಗುತ್ತದೆ.

‘45 ಲಕ್ಷ ಡೋಸ್ಗಳಷ್ಟು ಲಸಿಕೆ ಪೂರೈಸುವಂತೆ ಕೇಂದ್ರ ಸರ್ಕಾರ ಹೊಸದಾಗಿ ಪತ್ರ ನೀಡಿದೆ. ಸಚಿವಾಲಯದಿಂದ ಬೇಡಿಕೆಯ ಆದೇಶ ಪ್ರತಿ ಬಂದ ಕೂಡಲೇ ಲಸಿಕೆಗಳನ್ನು ಸರಬರಾಜು ಮಾಡಲಾಗುತ್ತದೆ‘ ಎಂದು ಮೂಲಗಳು ಸುದ್ದಿ ಸಂಸ್ಥೆಗೆ ತಿಳಿಸಿವೆ.

ಈ ಹಿಂದೆ ಸರ್ಕಾರದ ಆದೇಶದಂತೆ ಭಾರತ್ ಬಯೋಟೆಕ್ ಕಂಪನಿ, ಮೊದಲ ಬ್ಯಾಚ್ನಲ್ಲಿ 55 ಲಕ್ಷ ಡೋಸ್ಗಳಷ್ಟು ಕೋವ್ಯಾಕ್ಸಿನ್ ಲಸಿಕೆಯನ್ನು ಗನ್ನಾವರಂ(ವಿಜಯವಾಡ), ಗುವಾಹಟಿ, ಪಟ್ನಾ, ದೆಹಲಿ, ಕುರುಕ್ಷೇತ್ರ, ಬೆಂಗಳೂರು, ಪುಣೆ, ಭುವನೇಶ್ವರ್, ಜೈಪುರ, ಚೆನ್ನೈ ಮತ್ತು ಲಖನೌಗೆ ಸರಬರಾಜು ಮಾಡಲಾಗಿತ್ತು ಎಂದು ಕಂಪನಿ ತಿಳಿಸಿದೆ. ಇದರ ಜತೆಗೆ ಕಂಪನಿ 16.5 ಲಕ್ಷ ಡೋಸ್ಗಳಷ್ಟು ಲಸಿಕೆಯನ್ನು ಸರ್ಕಾರಕ್ಕೆ ದೇಣಿಗೆಯಾಗಿ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.