ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ | ಸೂಜಿರಹಿತ ʼಝೈಕೋವ್-ಡಿʼ ಶೀಘ್ರವೇ ಲಸಿಕೆ ಅಭಿಯಾನದಲ್ಲಿ ಬಳಕೆ: ಕೇಂದ್ರ

Last Updated 30 ಸೆಪ್ಟೆಂಬರ್ 2021, 16:45 IST
ಅಕ್ಷರ ಗಾತ್ರ

ನವದೆಹಲಿ:ಔಷಧ ತಯಾರಿಕಾ ಕಂಪೆನಿ ಝೈಡಸ್‌ ಕ್ಯಾಡಿಲಾ ಸೂಜಿರಹಿತ ಕೋವಿಡ್-19 ಲಸಿಕೆ ʼಝೈಕೋವ್-ಡಿʼಯನ್ನು ದೇಶೀಯವಾಗಿ ಅಭಿವೃದ್ಧಿ ಪಡಿಸಿದೆ. ಇದನ್ನು ದೇಶದಾದ್ಯಂತ ನಡೆಯುತ್ತಿರುವ ಲಸಿಕೆ ಅಭಿಯಾನದಲ್ಲಿಶೀಘ್ರದಲ್ಲೇಪರಿಚಯಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಝೈಕೋವ್-ಡಿ ಲಸಿಕೆ ಖರೀದಿ ಸಂಬಂಧ ಕಂಪೆನಿಯೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಮಾಧ್ಯಮದವರಿಗೆ ತಿಳಿಸಿದ್ದಾರೆ.

ʼಲಸಿಕೆ ಖರೀದಿ ದರಕ್ಕೆ ಸಂಬಂಧಿಸಿದಂತೆ ಕಂಪೆನಿಯೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಇದು ಮೂರು ಡೋಸ್‌ನ ಲಸಿಕೆ ಮತ್ತು ಸೂಜಿರಹಿತವಾಗಿರುವುದರಿಂದ ಸದ್ಯ ಅಭಿಯಾನದಲ್ಲಿ ಬಳಸುತ್ತಿರುವ ಲಸಿಕೆಗಳಿಗಿಂತ ಭಿನ್ನವಾದ ಬೆಲೆ ಹೊಂದಿರಲಿದೆ. ಶೀಘ್ರದಲ್ಲೇ ಲಸಿಕೆ ಅಭಿಯಾನದಲ್ಲಿ ಇದನ್ನು‌ ಪರಿಚಯಿಸಲಾಗುತ್ತದೆʼ ಎಂದು ಭೂಷಣ್‌ ಹೇಳಿದ್ದಾರೆ.

ಭಾರತೀಯ ಪ್ರಧಾನ ಔಷಧ ನಿಯಂತ್ರಕವು (ಡಿಸಿಜಿಐ)ಝೈಕೋವ್-‌ಡಿ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿದೆ. ಇದನ್ನು 12 ವರ್ಷಕ್ಕಿಂತಮೇಲ್ಪಟ್ಟವರಿಗೆ ನೀಡಲಾಗುತ್ತದೆ.

ಸದ್ಯ ಲಸಿಕೆ ಅಭಿಯಾನದಲ್ಲಿ ಬಳಸುತ್ತಿರುವಕೋವಿಶೀಲ್ಡ್‌, ಕೋವ್ಯಾಕ್ಸಿನ್‌, ಸ್ಪುಟ್ನಿಕ್‌-ವಿ ಲಸಿಕೆಗಳನ್ನು18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಮಾತ್ರ ನೀಡಲಾಗುತ್ತಿದೆ. ಅಷ್ಟಲ್ಲದೆ, ಇವನ್ನು ಒಬ್ಬರಿಗೆ ಎರಡು ಡೋಸ್‌ ಮಾತ್ರವೇ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT