ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

23 ನಾಯಿ ತಳಿಗಳ ನಿಷೇಧ

Published 13 ಮಾರ್ಚ್ 2024, 23:36 IST
Last Updated 13 ಮಾರ್ಚ್ 2024, 23:36 IST
ಅಕ್ಷರ ಗಾತ್ರ

ನವದೆಹಲಿ: ‘ಅತ್ಯಂತ ಕ್ರೂರ’ ಹಾಗೂ ‘ಮನುಷ್ಯನ ಜೀವಕ್ಕೆ ಅಪಾಯ’ ಎಂದು ಪರಿಗಣಿಸಲಾದ 23 ನಾಯಿ ತಳಿಗಳನ್ನು ವಿದೇಶಗಳಿಂದ ತರಿಸಿಕೊಳ್ಳುವುದು, ಅವುಗಳ ಮಾರಾಟ ಹಾಗೂ ಸಂತಾನಾಭಿವೃದ್ದಿ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ.

ಈ ಕುರಿತು, ಮೀನುಗಾರಿಕೆ, ಪಶುಸಂಗೋಪನೆ ಹಾಗೂ ಹೈನುಗಾರಿಕೆ ಸಚಿವಾಲಯದ ಜಂಟಿ ಕಾರ್ಯದರ್ಶಿ ಡಾ.ಒ.ಪಿ.ಚೌಧರಿ ಅವರು ಎಲ್ಲ ರಾಜ್ಯಗಳಿಗೆ ಪತ್ರ ಬರೆದಿದ್ದಾರೆ. ಪ್ರಾಣಿದಯಾ ಸಂಘ ‘ಪೇಟಾ’ದ ಮನವಿ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

ಪಿಟ್‌ಬುಲ್‌ ಟೆರಿಯರ್, ಟೋಸಾ ಇನು, ಅಮೆರಿಕನ್ ಸ್ಟಾಫೋರ್ಡ್‌ಶೈರ್ ಟೆರಿಯರ್, ಡೋಗೊ ಅರ್ಜೆಂಟಿನೊ, ರಷ್ಯನ್‌ ಶೆಫರ್ಡ್, ರೋಡೆಷಿಯನ್ ರಿಜ್‌ಬ್ಯಾಕ್, ವೋಲ್ಫ್‌ ಡಾಗ್ಸ್, ಮಾಸ್ಕೊ ಗಾರ್ಡ್‌ ಡಾಗ್ ನಿಷೇಧಿಸಲಾಗಿರುವ ಪ್ರಮುಖ ನಾಯಿ ತಳಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT