ನಾಯ್ಡು ಹಾಗೂ ಭದ್ರತಾ ಸಿಬ್ಬಂದಿ ಅವರು ರೈಲ್ವೆ ಹಳಿ ಪಕ್ಕದಲೇ ವೀಕ್ಷಣೆ ಮಾಡುತ್ತಿದ್ದರು. ಅವರಿಗೂ ರೈಲ್ವೆ ಹಳಿಗೂ ಕೆಲವೇ ಮೀಟರ್ ದೂರ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವೇಳೆ ಯಾವುದೇ ಅನಾಹುತ ಸಂಭವಿಸಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿಗಳ ಸಮೀಪದಲ್ಲಿ ಹಾದು ಹೋಗುವ ರೈಲಿನ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ವಿಜಯವಾಡದಲ್ಲಿ ಭಾನುವಾರ ಒಂದೇ ದಿನ 37 ಸೆಂ.ಮೀ ಮಳೆ ಸುರಿದಿದೆ. ಬುಡಮೇರು ನದಿ ಉಕ್ಕಿ ಹರಿದಿದ್ದು ಭಾರಿ ಪ್ರವಾಹಕ್ಕೆ ಕಾರಣವಾಗಿದೆ. ಈ ಪ್ರವಾಹವು 2005ರ ವಿಜಯವಾಡ ಪ್ರವಾಹಕ್ಕಿಂತ ಭೀಕರವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.