ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಯಾನ–3: ಮತ್ತಷ್ಟು ಚಂದ್ರನ ಸನಿಹಕ್ಕೆ ವಿಕ್ರಮ್ ಲ್ಯಾಂಡರ್

ವೇಗ ತಗ್ಗಿಸುವ ಪ್ರಕ್ರಿಯೆ ಯಶಸ್ವಿ
Published 18 ಆಗಸ್ಟ್ 2023, 14:44 IST
Last Updated 18 ಆಗಸ್ಟ್ 2023, 14:44 IST
ಅಕ್ಷರ ಗಾತ್ರ

ಬೆಂಗಳೂರು: ನೋದನ ಘಟಕದಿಂದ ಪ್ರತ್ಯೇಕಗೊಂಡಿರುವ ಲ್ಯಾಂಡರ್‌ನ ವೇಗ ತಗ್ಗಿಸುವ ಪ್ರಕ್ರಿಯೆ (ಡೀಬೂಸ್ಟ್‌) ಯಶಸ್ವಿಯಾಗಿದ್ದು, ಮತ್ತಷ್ಟು ಚಂದ್ರನ ಸಮೀಪ ಸಾಗುತ್ತಿದೆ ಎಂದು ಇಸ್ರೊ ಶುಕ್ರವಾರ ಹೇಳಿದೆ.

‘ಚಂದ್ರಯಾನ–3’ ನೌಕೆಯ ಲ್ಯಾಂಡರ್‌ ಘಟಕ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಲ್ಯಾಂಡರ್‌(ವಿಕ್ರಮ್) ಹಾಗೂ ರೋವರ್ (ಪ್ರಗ್ಯಾನ್‌) ಒಳಗೊಂಡಿರುವ ಈ ಘಟಕದ ಎರಡನೇ ಹಂತದ ‘ಡೀಬೂಸ್ಟ್‌’ ಪ್ರಕ್ರಿಯೆಯನ್ನು ಆಗಸ್ಟ್‌ 20ರಂದು ರಾತ್ರಿ 2ಕ್ಕೆ ನೆರವೇರಿಸಲಾಗುತ್ತದೆ ಎಂದು ತಿಳಿಸಿದೆ.

‘ಎರಡನೇ ಹಂತದಲ್ಲಿ ಕೈಗೊಳ್ಳುವ ವೇಗ ತಗ್ಗಿಸುವ ಕಾರ್ಯಾಚರಣೆಯು ಲ್ಯಾಂಡರ್‌ ಘಟಕವನ್ನು ಚಂದ್ರನ ಮೇಲ್ಮೈಗೆ ಬಹಳ ಹತ್ತಿರವಿರುವ ಕಕ್ಷೆ ಸೇರುವಂತೆ ಮಾಡಲಿದೆ’ ಎಂಬ ಮಾಹಿತಿಯನ್ನು ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಇಸ್ರೊ ಹಂಚಿಕೊಂಡಿದೆ.

ನೋದನ ಘಟಕದಿಂದ (ಪ್ರೊಪಲ್ಷನ್ ಮಾಡ್ಯೂಲ್) ಲ್ಯಾಂಡರ್ ಘಟಕ ಗುರುವಾರ ಪ್ರತ್ಯೇಕಗೊಂಡಿದೆ. ನೋದನ ಘಟಕವು ಪ್ರಸ್ತುತ ತಾನಿರುವ ಕಕ್ಷೆಯಲ್ಲಿಯೇ ತಿಂಗಳು/ವರ್ಷಗಟ್ಟಲೇ ಪರಿಭ್ರಮಿಸುತ್ತಿರಲಿದೆ ಎಂದೂ ತಿಳಿಸಿದೆ.

ಲ್ಯಾಂಡರ್‌ ಘಟಕವನ್ನು ಆಗಸ್ಟ್‌ 23ರಂದು ಚಂದ್ರನ ದಕ್ಷಿಣ ಧ್ರುವದ ಅಂಗಳದಲ್ಲಿ  (ಸಾಫ್ಟ್‌ ಲ್ಯಾಂಡಿಂಗ್‌) ಇಳಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT