ನವದೆಹಲಿ: ಕಾಶ್ಮೀರದ ರಿಯಾಸಿ ಜಿಲ್ಲೆಯ ಕಟ್ರಾ ಬಳಿ ಚೆನಾಬ್ ನದಿಗೆ ನಿರ್ಮಿಸಿರುವ, ವಿಶ್ವದ ಅತ್ಯಂತ ಎತ್ತರದ ರೈಲ್ವೆ ಸೇತುವೆ ಸದ್ಯ ಎಲ್ಲರನ್ನೂ ಆಕರ್ಷಿಸುತ್ತಿದೆ. ಈ ಸೇತುವೆ ಶ್ರೀನಗರಕ್ಕೆ ತೆರಳುವ ವಿಮಾನ ಪ್ರಯಾಣಿಕರ ಕಣ್ಸೆಳೆಯುತ್ತಿದೆ ಎಂದು ರೈಲ್ವೆ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಸೇತುವೆಯ ನೇರಕ್ಕೆ ವಿಮಾನ ಬರುತ್ತಲೇ ಕ್ಯಾಬಿನ್ ಸಿಬ್ಬಂದಿ. ‘ಜಗತ್ತಿನ ಅತಿ ಎತ್ತರದ ಚೆನಾಬ್ ಸೇತುವೆಯನ್ನು ನೀವು ಕೆಳಗೆ ನೋಡಬಹುದು’ ಎನ್ನುತ್ತಾರೆ. ಆಗ ಪ್ರಯಾಣಿಕರ ಮುಖದಲ್ಲಿ ನಗು ಮೂಡುತ್ತದೆ. ಚಪ್ಪಾಳೆ ತಟ್ಟಿ ದೇಶದ ಹೆಮ್ಮೆಯನ್ನು ಸಂಭ್ರಮಿಸುತ್ತಾರೆ. ಕಿಟಿಕಿ ಬಳಿ ಫೋಟೊ, ವಿಡಿಯೊಗಾಗಿ ಮುಗಿಬೀಳುತ್ತಾರೆ. ವಿಮಾನವು ಚೆನಾಬ್ ಸೇತುವೆಯ ವೀಕ್ಷಣಾ ಗ್ಯಾಲರಿಯಂತಾಗಿದೆ ಎಂದು ಸಚಿವಾಲಯ ಖುಷಿ ಹಂಚಿಕೊಂಡಿದೆ.

ಸೇತುವೆ ಉದ್ಘಾಟನೆಯಾದ ಬಳಿಕ ಹತ್ತಿರದ ಊರಿನವರು, ಪರ್ವತ ಪ್ರದೇಶದಲ್ಲಿ ವಾಸಿಸುವರೂ ಸೇತುವೆ ಹತ್ತಿರ ಆಗಮಿಸಿ ವಿವಿಧ ರೀತಿಯಲ್ಲಿ ಫೋಟೊ, ವಿಡಿಯೊ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಕೆಲವರಂತೂ ನೇರಪ್ರಸಾರ ಮಾಡುತ್ತಿದ್ದಾರೆ ಎಂದು ಸಚಿವಾಲಯ ಹೇಳಿದೆ.

ಜೂನ್ 6 ರಂದು ಪ್ರಧಾನಿ ನರೇಂದ್ರ ಮೋದಿಯವರು ಐತಿಹಾಸಿಕ ಚೆನಾಬ್ ಸೇತುವೆಯನ್ನು ಉದ್ಘಾಟಿಸಿದ್ದಾರೆ.

ಚೆನಾಬ್ ನದಿಗೆ ನಿರ್ಮಿಸಿರುವ ಈ ಸೇತುವೆ ನದಿಮಟ್ಟದಿಂದ 359 ಮೀಟರ್ ಎತ್ತರವಿದ್ದು, 1,315 ಮೀಟರ್ ಉದ್ದವಿದೆ. ವಿಶ್ವವಿಖ್ಯಾತ ಐಫೆಲ್ ಟವರ್ಗಿಂತ 35 ಮೀಟರ್ ಎತ್ತರವಾಗಿದೆ.

ಈ ಸೇತುವೆಯು ಉಧಂಪುರ–ಶ್ರೀನಗರ–ಬಾರಾಮುಲ್ಲಾ ಸಂಪರ್ಕ (ಯುಎಸ್ಬಿಆರ್ಎಲ್) ಯೋಜನೆಯ ಭಾಗವಾಗಿದೆ.

ಚೆನಾಬ್ ಸೇತುವೆಯನ್ನು ₹1,486 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು, ಗಂಟೆಗೆ 260 ಕಿ.ಮೀ. ವೇಗದಲ್ಲಿ ಬೀಸುವ ಗಾಳಿಯು ಸೃಷ್ಟಿಸುವ ಒತ್ತಡವನ್ನು ತಡೆಯುವ ಸಾಮರ್ಥ್ಯ ಹೊಂದಿದೆ. ಈ ಸೇತುವೆ 120 ವರ್ಷಗಳಷ್ಟು ಬಾಳಿಕೆ ಬರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
.ವಿಶ್ವ ಅತಿ ಎತ್ತರದ ರೈಲ್ವೆ ಸೇತುವೆ ಉದ್ಗಾಟನೆ: ರೈಲು ಸಂಪರ್ಕದಲ್ಲಿ ಮೈಲಿಗಲ್ಲು.ಚೆನಾಬ್ ಸೇತುವೆ ನಿರ್ಮಾಣಕ್ಕೆ ಐಐಎಸ್ಸಿ ಪ್ರಾಧ್ಯಾಪಕಿ ಮಾರ್ಗದರ್ಶನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.