ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೋಂ ವರ್ಕ್‌’ ವಿರುದ್ಧ ಚೆನ್ನೈ ಮಹಿಳೆ ಧ್ವನಿ

ನಿಷೇಧ ಕೋರಿ ಸರ್ಕಾರಕ್ಕೆ ಆನ್‌ಲೈನ್‌ನಲ್ಲಿ ಮನವಿ
Last Updated 16 ಸೆಪ್ಟೆಂಬರ್ 2018, 18:10 IST
ಅಕ್ಷರ ಗಾತ್ರ

ನವದೆಹಲಿ: ಮಕ್ಕಳಿಗೆ ಹೊರೆಯಾಗುತ್ತಿರುವ ‘ಹೋಂ ವರ್ಕ್‌’ ವಿರುದ್ಧ ಚೆನ್ನೈನ ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ ತಕರಾರು ಎತ್ತಿದ್ದಾರೆ.

ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ‘ಹೋಂ ವರ್ಕ್‌’ ನಿಷೇಧಿಸುವಂತೆ ಕೋರಿ ಮೃದುಲಾ ಮಣಿಯನ್‌ ಎಂಬುವರು ಆನ್‌ಲೈನ್‌ನಲ್ಲಿಯೇ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಅವರ ಮನವಿಗೆ ಎಂಟು ಸಾವಿರ ಜನ ಪೋಷಕರು, ವಿದ್ಯಾರ್ಥಿಗಳು ಧ್ವನಿಗೂಡಿಸಿದ್ದಾರೆ.

‘ಶಿಕ್ಷಕರು ನೀಡುವ ‘ಮನೆಗೆಲಸ’ ಮನೆಯಲ್ಲಿಯಲ್ಲಿ ಆತಂಕ ಸೃಷ್ಟಿಸುತ್ತಿದ್ದು, ಪೋಷಕರು ಮತ್ತು ಮಕ್ಕಳ ಪಾಲಿಗೆ ಕಣ್ಣೀರು ಶಿಕ್ಷೆಯಾಗಿ ಪರಿಣಮಿಸಿದೆ. ಹೋಂ ವರ್ಕ್‌ ಹೆಸರು ಕೇಳಿದರೆ ಬೆಚ್ಚಿ ಬೀಳುವಂತಾಗಿದೆ’ ಎಂದು ಎರಡು ಮಕ್ಕಳ ತಾಯಿಯಾಗಿರುವ ಮೃದುಲಾ ಅಲವತ್ತುಕೊಂಡಿದ್ದಾರೆ.

‘ಓದು, ಬರಹದ ಜತೆಗೆ ಪ್ರಾಜೆಕ್ಟ್‌ ಕೆಲಸ ನೀಡಲು ತಕರಾರು ಇಲ್ಲ. ಐದು ವರ್ಷದ ಮಕ್ಕಳಿಗೆ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ‘ನಾಸಾ’ ಕುರಿತು ಹೋಂ ವರ್ಕ್ ನೀಡಿದರೆ ಏನು ಗತಿ’ ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.

ಮಕ್ಕಳು ‘ನಾಸಾ’ ಕುರಿತು ಸರಳವಾಗಿ ಹತ್ತು ಸಾಲು ಬರೆಯಲು ಪೋಷಕರು ತಾಸುಗಟ್ಟಲೇ ಗೂಗಲ್‌ನಲ್ಲಿ ಪರದಾಡಬೇಕಾಗುತ್ತದೆ ಎಂದು ಅವರು ಅಸಮಾಧಾನ ತೋಡಿಕೊಂಡಿದ್ದಾರೆ.

ಆಡಿ ನಲಿಯಬೇಕಾಗದ ಇಷ್ಟು ಚಿಕ್ಕ ವಯಸ್ಸಿನ ಪೂರ್ವ ಪ್ರಾಥಮಿಕ, ಕಿಂಡರ್‌ ಗಾರ್ಟನ್‌ ಮಕ್ಕಳಿಗೆ ದಿಢೀರ್‌ ಪರೀಕ್ಷೆ, ವಾರದ ಪರೀಕ್ಷೆ, ಯೂನಿಟ್‌ ಟೆಸ್ಟ್... ಹೀಗೆ ಇಷ್ಟೊಂದು ಕಠಿಣ ಶಿಕ್ಷೆ ಏಕೆ ತಿಳಿಯುತ್ತಿಲ್ಲ.ಎರಡನೇ ತರಗತಿವರೆಗೆ ಹೋಂ ವರ್ಕ್‌ ಬೇಡ ಎಂದು ನ್ಯಾಯಾಲಯ ಆದೇಶ ನೀಡಿದೆ. ಆದರೂ ಹೋಂ ವರ್ಕ್‌ ಹಾವಳಿ ನಿಂತಿಲ್ಲ. ಇದರಿಂದ ಮಕ್ಕಳು ಮತ್ತು ಪೋಷಕರ ಮಾನಸಿಕ ಮತ್ತು ದೈಹಿಕ ಒತ್ತಡ ಹೆಚ್ಚುತ್ತಿದೆ ಎಂದು ಮೃದುಲಾ ದೂರಿದ್ದಾರೆ.

‘ಇದು ಕೇವಲ ನನ್ನೊಬ್ಬಳ ಗೋಳು ಅಲ್ಲ. ಎಲ್ಲ ಪೋಷಕರಿಗೂ ಇದೇ ರೀತಿಯ ಕಹಿ ಅನುಭವವಾಗಿರಲು ಸಾಕು. ಇದು ಒಂದು ಅಥವಾ ಎರಡು ಶಾಲೆಗಳ ಕಥೆ ಅಲ್ಲ. ದೇಶದ ಶೇ 98ರಷ್ಟು ಶಾಲೆಗಳ ಗೋಳು ಇದೆ ಆಗಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT