ಶ್ರೀನಗರ: ಶ್ರಾವಣ ಅಮಾವಾಸ್ಯೆ ನಿಮಿತ್ತ ಭಾನುವಾರ ಇಲ್ಲಿನ ಶಂಕರಾಚಾರ್ಯ ದೇಗುಲದಲ್ಲಿ ಪೂಜೆ ಸಲ್ಲಿಸಲು ಸ್ವಾಮಿ ಅಮರನಾಥ ಅವರ ಪವಿತ್ರ ಗದೆಯನ್ನು ಶ್ರದ್ಧಾ, ಭಕ್ತಿಯಿಂದ ಒಯ್ಯಲಾಯಿತು.
ಪ್ರಸಕ್ತ ವರ್ಷದ ಅಮರನಾಥ ಯಾತ್ರೆಯ ನಿಮಿತ್ತ ನಡೆದ ಈ ಕಾರ್ಯಕ್ರಮದ ನೇತೃತ್ವವನ್ನು ಮಹಂತ ದೀಪೇಂದ್ರ ಗಿರಿ ಅವರು ವಹಿಸಿದ್ದರು. ಮೆರವಣಿಗೆಯಲ್ಲಿ ಸ್ವಾಮೀಜಿಗಳು, ಸಾಧುಗಳು ಭಾಗವಹಿಸಿದ್ದರು.
ಶ್ರಾವಣ ಅಮಾವಾಸ್ಯೆ ನಿಮಿತ್ತ ದೇಗುಲದಲ್ಲಿ ಪ್ರಾಚೀನ ಸಂಪ್ರದಾಯದಂತೆ ವಿಶೇಷ ಪ್ರಾರ್ಥನೆ ನಡೆಯಲಿದೆ ಎಂದು ಹೇಳಿಕೆ ತಿಳಿಸಿದೆ.
ಡಲ್ ಗೇಟ್ ಪ್ರದೇಶದಲ್ಲಿನ ಜಬರ್‌ವನ್ ಬೆಟ್ಟ ಪ್ರದೇಶದಲ್ಲಿ ಶಂಕರಾಚಾರ್ಯ ದೇವಸ್ಥಾನವಿದೆ. ಈ ಹಿಂದೆ ದೇವಸ್ಥಾನವನ್ನು ಜ್ಯೋತೀಶ್ವರ ದೇವಸ್ಥಾನ ಎಂದು ಗುರುತಿಸಲಾಗುತ್ತಿತ್ತು. ಆದಿ ಶಂಕರಾಚಾರ್ಯ ಅವರು ಭೇಟಿ ನೀಡಿದ ಬಳಿಕ ಶಂಕರಾಚಾರ್ಯ ದೇವಸ್ಥಾನ ಎಂದೇ ಗುರುತಿಸಲಾಗುತ್ತಿದೆ.