ರಾಯ್ಪುರ: ಛತ್ತೀಸಗಢದ ಬಸ್ತಾರ್ ವಲಯದಲ್ಲಿ 21 ನಕ್ಸಲರು ಪೊಲೀಸರ ಎದುರು ಶರಣಾಗಿದ್ದಾರೆ.

ಬಸ್ತಾರ್ ವಲಯದ ಪೊಲೀಸರ ಪ್ರಕಾರ, ನಕ್ಸಲ್ ವಿಭಾಗೀಯ ಸಮಿತಿ ಕಾರ್ಯದರ್ಶಿ ಸೇರಿ ನಾಲ್ವರು ಉಪಸಮಿತಿ ಸದಸ್ಯರು, 9 ಪ್ರದೇಶ ಸಮಿತಿ ಸದಸ್ಯರು ಹಾಗೂ 8 ಮಂದಿ ನಕ್ಸಲ್ ಪಕ್ಷದ ಸದಸ್ಯರು ಶರಣಾಗಿದ್ದಾರೆ.

ಹಿಂಸಾಚಾರದಿಂದ ಯಾವುದೇ ಲಾಭವಿಲ್ಲ ಎನ್ನುವುದನ್ನು ಇವರು ಅರಿತುಕೊಂಡಿದ್ದಾರೆ. ತಮ್ಮ ಹೊಸ ಜೀವನವನ್ನು ಆರಂಭಿಸಲು ಮುಖ್ಯವಾಹಿನಿಗೆ ಮರಳಲು ನಿರ್ಧರಿಸಿದ್ದಾರೆ ಎಂದು ಬಸ್ತಾರ್ ವಲಯದ ಪೊಲೀಸ್ ಮಹಾನಿರೀಕ್ಷಕ ಪಿ. ಸುಂದರ್ರಾಜ್ ತಿಳಿಸಿದ್ದಾರೆ.

ಶರಣಾದವರಲ್ಲಿ 13 ಮಂದಿ ಮಹಿಳೆಯರು ಮತ್ತು 8 ಜನ ಪುರುಷರು ಸೇರಿದ್ದಾರೆ. ಶರಣಾಗತಿ ವೇಳೆ ನಕ್ಸಲರು, ಮೂರು ಎಕೆ 47 ರೈಫಲ್ಸ್ ಸೇರಿ 18 ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.