ಸುಕ್ಮಾ: ಒಂಬತ್ತು ಗಲಭೆ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ, ₹5 ಲಕ್ಷ ಇನಾಮು ಘೋಷಣೆಯಾಗಿದ್ದ ಮಹಿಳಾ ನಕ್ಸಲ್, ಛತ್ತೀಸಗಢದ ಸುಕ್ಲಾ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ನಡೆಸಿದ ಎನ್ಕೌಂಟರ್ನಲ್ಲಿ ಹತ್ಯೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಫ್ಡಿ ಮತ್ತು ಪರಂಪರಾ ಗ್ರಾಮದ ಅರಣ್ಯ ಪ್ರದೇಶದಲ್ಲಿ ಗುರುವಾರ ಬೆಳಿಗ್ಗೆ ಜಿಲ್ಲಾ ಮೀಸಲು ಪೊಲೀಸ್ ಪಡೆ ಶೋಧ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಗುಂಡಿನ ಚಕಮಕಿ ನಡೆದಿದೆ.

ಬಳಿಕ ಅರಣ್ಯದಲ್ಲಿ ಮಹಿಳಾ ನಕ್ಸಲ್ ಮೃತದೇಹ ಸಿಕ್ಕಿದ್ದು, ಮೃತ ಮಹಿಳೆಯನ್ನು ಬಸ್ಕಿ ನಪ್ಪೂ (35) ಎಂದು ಗುರುತಿಸಲಾಗಿದೆ.

ಮೃತದೇಹದ ಬಳಿ ಬೋರ್ ರೈಫಲ್, 5 ಕಾಡೂತೂಸು, ಒಂದು ವೈರ್ಲೆಸ್ ಪೋನ್. ಕಾರ್ಡೆಕ್ಸ್ ತಂತಿ, ಜಿಲೆಟಿನ್ ರಾಡ್, ಗನ್ಪೌಡರ್, ರೆಡಿಯೊ, ಮಾವೋವಾದಿ ಸಾಹಿತ್ಯ ಸೇರಿದಂತೆ ಹಲವು ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.