ಜೆಜೆಬಿಗಳ ಸ್ಥಿತಿಗತಿಗಳ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ದತ್ತಾಂಶಗಳನ್ನು ದಾಖಲು ಮಾಡಲಾಗುತ್ತಿಲ್ಲ. ಆದ್ದರಿಂದ, ಇಂಡಿಯಾ ಜಸ್ಟೀಸ್ ರಿಪೋರ್ಟ್ ಸಂಸ್ಥೆಯು ಈ ಕುರಿತು ಮಾಹಿತಿ ಕೋರಿ ಒಟ್ಟು 250 ಅರ್ಜಿ ಸಲ್ಲಿಸಿತ್ತು. ಇವುಗಳಲ್ಲಿ ಶೇ 11ರಷ್ಟು ಅರ್ಜಿಗಳನ್ನು ತಿರಸ್ಕರಿಸಲಾಯಿತು. ಶೇ 24ರಷ್ಟು ಅರ್ಜಿಗಳಿಗೆ ಉತ್ತರವೇ ಬರಲಿಲ್ಲ. ಶೇ 29ರಷ್ಟು ಅರ್ಜಿಗಳನ್ನು ಬೇರೆ ಜೆಜೆಬಿಗಳಿಗೂ ವರ್ಗಾಯಿಸಲಾಯಿತು. ಕೇವಲ ಶೇ39ರಷ್ಟು ಅರ್ಜಿಗಳಿಗೆ ಉತ್ತರ ದೊರೆಯಿತು.