’ಭಾರತವು ಚೀನಾದೊಂದಿಗೆ ಸಂಬಂಧ ಮರುಸ್ಥಾಪನೆಗೆ ಪ್ರಯತ್ನಿಸುತ್ತಿದೆ. ಈ ಸಂದರ್ಭದಲ್ಲೇ ಚೀನಾದಿಂದ ಈ ರೀತಿಯ ಪ್ರತಿಕ್ರಿಯೆ ಬಂದಿರುವುದು ಕಳವಳಕಾರಿ. ಪ್ರಧಾನಿ ನರೇಂದ್ರ ಮೋದಿ ಅವರು 2020ರ ಜೂನ್ 19ರಂದೇ ಚೀನಾಕ್ಕೆ ’ಕ್ಲೀನ್ ಚಿಟ್‘ ನೀಡಿದ್ದಾರೆ. ಇದು ಮಾತುಕತೆ ವಿಷಯದಲ್ಲಿ ಭಾರತದ ಸ್ಥಾನ ದುರ್ಬಲಗೊಂಡಿರುವುದನ್ನು ಸೂಚಿಸುತ್ತದೆ. ಅರುಣಾಚಲ ಪ್ರದೇಶದ ವಿಷಯದಲ್ಲೂ ಚೀನಾದ ಪ್ರಚೋದನಕಾರಿ ನೀತಿಗೆ ತಡೆ ಬಿದ್ದಿಲ್ಲ. ಇಂತಹ ಸಂದರ್ಭದಲ್ಲಿ ಚೀನಾ ಹೇಳಿಕೆ ಬಗ್ಗೆ ದೇಶದ ಜನರು ಪ್ರಧಾನಿಯಿಂದ ಸಷ್ಟತೆ ಬಯಸುತ್ತಿದ್ದಾರೆ ಎಂದು ಜೈರಾಂ ರಮೇಶ್ ಹೇಳಿದ್ದಾರೆ.