ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಹಡಗು ಶೋಧ: ಭಾರತೀಯ ನೌಕಾಪಡೆಯಿಂದ ‘ಪಿ–8ಐ’ ನಿಯೋಜನೆ

Published 18 ಮೇ 2023, 14:20 IST
Last Updated 18 ಮೇ 2023, 14:20 IST
ಅಕ್ಷರ ಗಾತ್ರ

ನವದೆಹಲಿ: ಹಿಂದೂ ಮಹಾಸಾಗರದಲ್ಲಿ ಮಂಗಳವಾರ ಮುಳುಗಿದ್ದ ಚೀನಾದ ಮೀನುಗಾರಿಕಾ ಹಡಗಿನ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಭಾರತೀಯ ನೌಕಾಪಡೆಯು ಪಿ–8ಐ ಕಡಲ ಪ್ರದೇಶ ಗಸ್ತು ಯುದ್ಧ ವಿಮಾನವನ್ನು ನಿಯೋಜಿಸಿದೆ.

ಈ ಕುರಿತು ನೌಕಾಪಡೆಯು ಮಾಹಿತಿ ನೀಡಿದೆ. ಹಿಂದೂ ಮಹಾಸಾಗರದ ದಕ್ಷಿಣ ಭಾಗದಲ್ಲಿ ಮುಳುಗಿರುವ ಚೀನಾದ ಮೀನುಗಾರಿಕಾ ಹಡಗಿನ ಶೋಧ ಕಾರ್ಯಾಚರಣೆಗಾಗಿ ಭಾರತೀಯ ನೌಕಾಪಡೆಯು ಮಾನವೀಯ ನೆಲೆಗಟ್ಟಿನಲ್ಲಿ ಪಿ–8ಐ ಯುದ್ಧ ವಿಮಾನವನ್ನು ನಿಯೋಜಿಸಿದೆ. ಪ್ರತಿಕೂಲ ಹವಾಮಾನದ ನಡುವೆಯೂ ಬುಧವಾರ ಯುದ್ಧ ವಿಮಾನವು ತೀವ್ರ ಸ್ವರೂಪದ ಶೋಧ ಕಾರ್ಯಾಚರಣೆ ನಡೆಸಿದೆ. ಮುಳುಗಿರುವ ಹಡಗಿನದ್ದು ಎಂದು ಭಾವಿಸಲಾಗಿರುವ ಹಲವಾರು ವಸ್ತುಗಳನ್ನು ಪತ್ತೆ ಮಾಡಿದೆ ಎಂದು ತಿಳಿಸಿದೆ. 

ಶೋಧ ಕಾರ್ಯಾಚರಣೆಯಲ್ಲಿ ಚೀನಾ, ಇಂಡೊನೇಷ್ಯಾ, ಫಿಲಿಪೀನ್ಸ್‌ ಪ್ರಜೆಗಳೂ ಇದ್ದಾರೆ ಎಂದು ನೌಕಾಪಡೆ ತಿಳಿಸಿದೆ. ಮುಳುಗಿರುವ ಹಡಗಿನಲ್ಲಿ 39 ಮಂದಿ ಸಿಬ್ಬಂದಿ ಇದ್ದರು ಎನ್ನಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT