ರಾಂಚಿ: ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್ ಬಣ) ಅಧ್ಯಕ್ಷರಾಗಿ ಚಿರಾಗ್ ಪಾಸ್ವಾನ್ ಭಾನುವಾರ ಮರು ಆಯ್ಕೆ ಆಗಿದ್ದಾರೆ.
‘ಕಾರ್ಯಕಾರಿ ಸಮಿತಿ ಸಭೆಯಲ್ಲಿ ನನ್ನ ಆಯ್ಕೆಯ ಕುರಿತು ತೀರ್ಮಾನ ತೆಗೆದುಕೊಳ್ಳಲಾಯಿತು. ಇನ್ನೂ ಐದು ವರ್ಷಗಳ ಅವಧಿಗೆ ನಾನು ಪಕ್ಷದ ಅಧ್ಯಕ್ಷನಾಗಿ ಇರುತ್ತೇನೆ’ ಎಂದು ಕೇಂದ್ರ ಸಚಿವರೂ ಆಗಿರುವ ಚಿರಾಗ್ ಪಾಸ್ವಾನ್ ಹೇಳಿದರು.
ಮುಂದೆ ನಡೆಯಲಿರುವ ಹರಿಯಾಣ, ಜಮ್ಮು–ಕಾಶ್ಮೀರ ಹಾಗೂ ಜಾರ್ಖಂಡ್ ವಿಧಾನಸಭಾ ಚುನಾವಣೆ ಕಾರ್ಯತಂತ್ರದ ಬಗೆಗೂ ಸಭೆಯಲ್ಲಿ ಚರ್ಚೆ ನಡೆಯಿತು ಎಂದು ಅವರು ತಿಳಿಸಿದರು.