ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಜಿನ ಮನೆಯಲ್ಲಿ ವಾಸಿಸುವವರು ಕಲ್ಲು ಎಸೆಯಬಾರದು: ಉದ್ಧವ್‌ ಠಾಕ್ರೆಗೆ ಶಿಂದೆ ಎಚ್ಚರಿಕೆ

Published 25 ಜೂನ್ 2023, 13:05 IST
Last Updated 25 ಜೂನ್ 2023, 13:05 IST
ಅಕ್ಷರ ಗಾತ್ರ

ಮುಂಬೈ: ಗಾಜಿನ ಮನೆಯಲ್ಲಿ ವಾಸಿಸುವವರು ಕಲ್ಲು ಎಸೆಯಬಾರದು ಎಂದು ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮತ್ತು ಠಾಕ್ರೆ ನಡುವಿನ ವಾಗ್ದಾಳಿ ತೀರಾ ವೈಯಕ್ತಿಕ ಮಟ್ಟಕ್ಕೆ ಇಳಿದ ಬೆನ್ನಲ್ಲೇ ಈ ಹೇಳಿಕೆ ನೀಡಿದ್ದಾರೆ.

‘ಹಲವು ವಿಚಾರಗಳ ಬಗ್ಗೆ ನನಗೂ ತಿಳಿದಿದೆ. ಆದರೆ ಈಗ ಆ ವಿಷಯಗಳು ಬೇಡ. ಅವರು (ಠಾಕ್ರೆ) ಕಾಲ ಕಾಲಕ್ಕೆ ಸಹಾಯ ಮಾಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಫಡಣವೀಸ್ ಅವರಿಗೆ ವಿಧೇಯರಾಗಿರಬೇಕು. ರಾಜಕೀಯದಲ್ಲಿ ಯಾರೂ ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದು’ ಎಂದು ಹೇಳಿದ್ದಾರೆ.

 ‘ತಮ್ಮ ರಾಜಕೀಯ ಕುಟುಂಬ ಉಳಿಸಿಕೊಳ್ಳುವುದಕ್ಕೋಸ್ಕರ ವಿರೋಧ ಪಕ್ಷದವರು ಪಟ್ನಾದಲ್ಲಿ ಸಭೆ ಸೇರಿದ್ದಾರೆ’ ಎಂದು ಫಡಣವೀಸ್‌ ಹೇಳಿದ್ದರು. ಅಲ್ಲದೆ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ನೇತೃತೃದಲ್ಲಿ ಸರ್ಕಾರ ರಚಿಸಿದ್ದ ಬಿಜೆಪಿಯನ್ನು ಠಾಕ್ರೆ ಟೀಕಿಸುತ್ತಾರೆ, ಆದರೆ ಸಭೆಯಲ್ಲಿ ಅವರು ಮೆಹಬೂಬಾ ಮುಫ್ತಿ ಪಕ್ಕವೇ ಕುಳಿತಿದ್ದರು‘ ಎಂದು ಟೀಕಿಸಿದ್ದರು. 

ಇದಕ್ಕೆ ತಿರುಗೇಟು ನೀಡಿದ್ದ ಠಾಕ್ರೆ, ‘ನೀವು ಮುಫ್ತಿ ಅವರೊಂದಿಗೆ ಸರ್ಕಾರ ರಚಿಸಿದಾಗ ಹಿಂದುತ್ವವನ್ನು ತ್ಯಜಿಸಿದ್ದಿರಾ? ನೀವು ಧರಿಸಿರುವ ನಕಲಿ ಹಿಂದುತ್ವದ ಮುಖವಾಡವನ್ನು ಕಳಚಿಹಾಕುತ್ತೇವೆ’ ಎಂದು ಹೇಳಿದ್ದರು. ಅಲ್ಲದೇ ಮುಫ್ತಿ ಅವರು ಬಿಜೆಪಿಯ ಉನ್ನತ ನಾಯಕರೊಡನೆ ಕುಳಿತಿರುವ ಫೋಟೊಗಳನ್ನು ಸಹ ಪ್ರದರ್ಶಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT