ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೂಲ್‌ನಿಂದ ಹಾಲು ಸಂಗ್ರಹ: ಶಾಗೆ ಬರೆದ ಪತ್ರದಲ್ಲಿ ತಮಿಳುನಾಡು ಸಿಎಂ ಸ್ಟಾಲಿನ್‌ ಆಕ್ಷೇಪ

Published 26 ಮೇ 2023, 5:46 IST
Last Updated 26 ಮೇ 2023, 5:46 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡಿನಲ್ಲಿ ಹಾಲು ಸಂಗ್ರಹಣೆಗೆ ಮುಂದಾಗಿರುವ ಗುಜರಾತ್‌ನ ಅಮೂಲ್‌ ಧೋರಣೆಗೆ ಸಿ.ಎಂ ಎಂ.ಕೆ. ಸ್ಟಾಲಿನ್‌ ನೇತೃತ್ವದ ರಾಜ್ಯ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಕರ್ನಾಟಕದಲ್ಲಿಯೂ ಅಮೂಲ್‌, ಹಾಲು ಮಾರಾಟಕ್ಕೆ ಮುಂದಾಗಿತ್ತು. ಇದನ್ನು ವಿರೋಧಿಸಿ ‘ನಂದಿನಿ’ ಉಳಿಸಿ ಅಭಿಯಾನ ನಡೆದಿತ್ತು.

ಈಗ ತಮಿಳುನಾಡು ಹಾಲು ಉತ್ಪಾದಕರ ಸಹಕಾರ ಒಕ್ಕೂಟ (ಆವಿನ್‌)ದ ವ್ಯಾಪ್ತಿಯಲ್ಲಿ ಹಾಲು ಸಂಗ್ರಹಣೆಗೆ ಮುಂದಾಗಿರುವುದಕ್ಕೆ ಸ್ಟಾಲಿನ್‌ ವಿರೋಧ ವ್ಯಕ್ತಪಡಿಸಿದ್ದು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರವನ್ನೂ ಬರೆದಿದ್ದಾರೆ.

‘ಸಹಕಾರ ಸಂಘಗಳು ಹಾಲು ಉತ್ಪಾದನಾ ಪ್ರದೇಶಗಳಲ್ಲಿ ಹಸ್ತಕ್ಷೇಪ ಮಾಡದೆ ಅಭಿವೃದ್ಧಿ ಹೊಂದುವುದು ಭಾರತದಲ್ಲಿ ರೂಢಿಗತವಾಗಿದೆ. ಆದರೆ, ಅಮೂಲ್ ತಮಿಳುನಾಡಿನಲ್ಲಿ ಹಾಲು ಸಂಗ್ರಹಣೆಗೆ ಮುಂದಾಗಿದೆ. ಆ ಮೂಲಕ ಸಂಪ್ರದಾಯವನ್ನು ಉಲ್ಲಂಘಿಸುತ್ತಿದೆ. ಕೂಡಲೇ, ಈ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಅಮೂಲ್‌ಗೆ ನಿರ್ದೇಶನ ನೀಡಬೇಕು ಎಂದು ಸ್ಟಾಲಿನ್ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT