ನವದೆಹಲಿ: ದೆಹಲಿಯಿಂದ ನ್ಯೂಯಾರ್ಕ್ ನಡುವಿನ ಏರ್ ಇಂಡಿಯಾ ವಿಮಾನ ಪ್ರಯಾಣ ವೇಳೆ ನೀಡಲಾಗಿದ್ದ ಆಮ್ಲೆಟ್‌ನಲ್ಲಿ ಜಿರಳೆ ಪತ್ತೆಯಾಗಿದೆ ಎಂದು ಪ್ರಯಾಣಿಕರೊಬ್ಬರು ಆರೋಪಿಸಿದ್ದಾರೆ.
ಹೆಚ್ಚಿನ ತನಿಖೆಗಾಗಿ ಆಹಾರ ಪೂರೈಕೆದಾರರೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ ಎಂದು ಏರ್ ಇಂಡಿಯಾ ಹೇಳಿದೆ.
Found a cockroach in the omelette served to me on the @airindia flight from Delhi to New York. My 2 year old finished more than half of it with me when we found this. Suffered from food poisoning as a result. @DGCAIndia @RamMNK pic.twitter.com/1Eyc3wt3Xw
— Suyesha Savant (@suyeshasavant) September 28, 2024
ಆಮ್ಲೆಟ್‌ನಲ್ಲಿ ಜಿರಳೆ ಪತ್ತೆಯಾಗಿರುವ ಬಗ್ಗೆ ಪ್ರಯಾಣಿಕ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದರು.
‘ಆಮ್ಲೆಟ್‌ನಲ್ಲಿ ಜಿರಳೆ ಪತ್ತೆಯಾದಾಗ ನನ್ನ 2 ವರ್ಷದ ಮಗು ಅದನ್ನು ನನ್ನೊಂದಿಗೆ ಅರ್ಧಕ್ಕಿಂತ ಹೆಚ್ಚು ಭಾಗ ತಿಂದು ಮುಗಿಸಿತ್ತು. ಇದರಿಂದಾದ ವಿಷಾಹಾರ ಬಾಧೆಗೂ ಮಗು ಒಳಗಾಯಿತು’ ಎಂದು ಬರೆದುಕೊಂಡಿದ್ದಾರೆ.
ಜೊತೆಗೆ ಅದರ ವಿಡಿಯೊ ಹಾಗೂ ಚಿತ್ರಗಳನ್ನೂ ಹಾಕಿದ್ದು, ಏರ್ ಇಂಡಿಯಾ, ವಿಮಾನಯಾನ ನಿಯಂತ್ರಕ ಡಿ.ಜಿ.ಸಿ.ಎ. ಮತ್ತು ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಅವರನ್ನು ಪೋಸ್ಟ್‌ನಲ್ಲಿ ಟ್ಯಾಗ್ ಮಾಡಿದ್ದಾರೆ.
‘ಸೆಪ್ಟೆಂಬರ್ 17, 2024 ರಂದು ದೆಹಲಿಯಿಂದ ನ್ಯೂಯಾರ್ಕ್‌ನ ಜಾನ್ ಎಫ್. ಕೆನಡಿ ವಿಮಾನ ನಿಲ್ದಾಣಕ್ಕೆ ಏರ್ ಇಂಡಿಯಾ 101 ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು, ತಮಗೆ ನೀಡಲಾದ ಆಹಾರದಲ್ಲಿ ಅನ್ಯ ವಸ್ತು ಪತ್ತೆಯಾಗಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಬಗ್ಗೆ ನಮಗೆ ತಿಳಿದಿದೆ. ಗ್ರಾಹಕರ ಅನುಭವದ ಬಗ್ಗೆ ವಿಮಾನಯಾನ ಸಂಸ್ಥೆ ಕಾಳಜಿ ವಹಿಸಿದೆ’ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.
ಅಲ್ಲದೆ ಭವಿಷ್ಯದಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗುವುದನ್ನು ತಡೆಯಲು ನಾವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ವಕ್ತಾರರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.