ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಾಂತ್ರಿಕ ದೋಷ | ಮಾಸ್ಕೊದಲ್ಲಿ ಭೂಸ್ಪರ್ಶ ಮಾಡಿದ ಏರ್ ಇಂಡಿಯಾ ವಿಮಾನ

Published : 5 ಸೆಪ್ಟೆಂಬರ್ 2024, 9:25 IST
Last Updated : 5 ಸೆಪ್ಟೆಂಬರ್ 2024, 9:25 IST
ಫಾಲೋ ಮಾಡಿ
Comments

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಿಂದ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನತ್ತ ಹೊರಟಿದ್ದ ಏರ್ ಏಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ರಷ್ಯಾದ ಮಾಸ್ಕೊದಲ್ಲಿ ಬುಧವಾರ ಭೂಸ್ಪರ್ಶ ಮಾಡಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ಏರ್ ಇಂಡಿಯಾ ವಿಮಾನ ಮಾಸ್ಕೊದಲ್ಲಿ ಲ್ಯಾಂಡಿಂಗ್ ಮಾಡಿತು. ಅಗತ್ಯ ತಪಾಸಣೆಗಳನ್ನು ನಡೆಸಿದ ಬಳಿಕವು ವಿಮಾನವು ಮಾಸ್ಕೊದಿಂದ ಮತ್ತೆ ಬರ್ಮಿಂಗ್‌ಹ್ಯಾಮ್‌ನತ್ತ ಪ್ರಯಾಣ ಬೆಳೆಸಿತು ಎಂದು ಅವರು ತಿಳಿಸಿದ್ದಾರೆ.

ಏರ್ ಇಂಡಿಯಾ ವಿಮಾನವು ಇಂದು (ಗುರುವಾರ) ಮುಂಜಾನೆ ಬರ್ಮಿಂಗ್‌ಹ್ಯಾಮ್‌ನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿತು ಎಂದು ಅವರು ಮಾಹಿತಿ ನೀಡಿದ್ದಾರೆ.

ಬೋಯಿಂಗ್ 787 ಏರ್ ಇಂಡಿಯಾ 113 ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿತ್ತು. ಈ ಕುರಿತು ಸಂಸ್ಥೆಯಿಂದ ಅಧಿಕೃತ ಪ್ರಕಟಣೆ ಬಂದಿಲ್ಲ.

ವಿಮಾನದಲ್ಲಿ ಎಷ್ಟು ಪ್ರಮಾಣಿಕರು ಸಂಚರಿಸುತ್ತಿದ್ದರು ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT