ಪಾಲಾನ್ಪುರ: ಗುಜರಾತ್ನ ಬನಾಸ್ಕಾಂತ ಜಿಲ್ಲೆಯಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬಳ ನಗ್ನ ವಿಡಿಯೊ ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡಿ, 7 ಮಂದಿಯ ಗುಂಪೊಂದು ಆಕೆಯನ್ನು ಸುಮಾರು 16 ತಿಂಗಳು ಅತ್ಯಾಚಾರ ನಡೆಸಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
.ಪುಣೆ | ಅತ್ಯಾಚಾರ ಪ್ರಕರಣ: ಎಂಎಸ್ಆರ್ಟಿಸಿಯ ನಾಲ್ವರು ಅಧಿಕಾರಿಗಳು ಅಮಾನತು.
2023ರಲ್ಲಿ ಪಾಲಾನ್ಪುರದ ಕಾಲೇಜೊಂದಕ್ಕೆ ಸೇರ್ಪಡೆಯಾದ ಬಳಿಕ ಆರೋಪಿಗಳಲ್ಲಿ ಓರ್ವ ಇನ್ಸ್ಟಾಗ್ರಾಮ್ ಮೂಲಕ ಆಕೆಯ ಸ್ನೇಹ ಬೆಳೆಸಿದ್ದ. 2023ರ ನವೆಂಬರ್ನಲ್ಲಿ ಆಕೆಯ ಮನವೊಲಿಸಿ ಹೋಟೆಲ್ ಒಂದಕ್ಕೆ ಬೆಳಗಿನ ಉಪಾಹಾರಕ್ಕೆ ಕರೆದುಕೊಂಡು ಹೋಗಿದ್ದ. ಅಲ್ಲಿ ಉದ್ದೇಶಪೂರ್ವಕವಾಗಿ ಆಕೆಯ ಬಟ್ಟೆಗೆ ಆಹಾರ ಚೆಲ್ಲಿ, ಅದನ್ನು ಶುಚಿ ಮಾಡಲು ಕೋಣೆಗೆ ಕರೆದುಕೊಂಡು ಹೋಗಿದ್ದ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.

ಸಂತ್ರಸ್ತೆ ಶೌಚಾಲಯದಲ್ಲಿ ಬಟ್ಟೆ ಬಿಚ್ಚಿದ್ದು, ಈ ವೇಳೆ ಆರೋಪಿ ವಿಶಾಲ್ ಚೌದರಿ ಅಲ್ಲಿಗೆ ನುಗ್ಗಿ ವಿಡಿಯೊ ಮಾಡಿದ್ದಾರೆ. ಆಕೆ ಪ್ರತಿಭಟಿಸಿದಾಗ, ವಿಡಿಯೊ ಬಹಿರಂಗ ಮಾಡುವುದಾಗಿ, ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಸಿದ್ದಾಗಿ ಎಫ್ಐಆರ್ನಲ್ಲಿ ಹೇಳಲಾಗಿದೆ.
.ಅತ್ಯಾಚಾರ ಘಟನೆ: ಮೂರನೇ ಆರೋಪಿಯನ್ನು ತಮಿಳುನಾಡಿನಲ್ಲಿ ಬಂಧಿಸಿದ ಕೊಪ್ಪಳ ಪೊಲೀಸ್.
ಇದೇ ವಿಡಿಯೊವನ್ನು ಬಳಸಿಕೊಂಡು, ಆರೋಪಿ ಹಾಗೂ ಆತನ ಸ್ನೇಹಿತರು 2023ರ ನವೆಂಬರ್ನಿಂದ 2025ರ ಫೆಬ್ರುವರಿವರೆಗೆ ವಿವಿಧ ಸ್ಥಳಗಳಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ.

ಕೊನೆಗೆ ವಿದ್ಯಾರ್ಥಿ ಪಲಾನ್ಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆರು ಮಂದಿ ಹಾಗೂ ಓರ್ವ ಅಪರಿಚಿತನ ವಿರುದ್ಧ ಬಿಎನ್ಎಸ್ ಹಾಗೂ ಐಟಿ ಕಾಯ್ದೆಯಡಿ ದೂರು ದಾಖಲಾಗಿದೆ. ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
.ಕೋಲ್ಕತ್ತ ವೈದ್ಯೆ ಅತ್ಯಾಚಾರ, ಕೊಲೆ |ನ್ಯಾಯಕ್ಕಾಗಿ ಮೋದಿ ಭೇಟಿಗೆ ಮೃತಳ ತಾಯಿ ಮನವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.