ನವದೆಹಲಿ: ಪ್ರತಿ ವಿಶ್ವವಿದ್ಯಾಲಯಗಳು ಕೋರ್ಸ್‌ಗಳ ಪ್ರವೇಶಾತಿ ಶುಲ್ಕ, ಮರುಪಾವತಿ ವಿವರ, ವಾರ್ಷಿಕ ವರದಿ, ಫೆಲೋಶಿಪ್‌ಗಳ ವಿವರ ಸೇರಿದಂತೆ ಹಲವು ಮಾಹಿತಿಗಳನ್ನು ತಮ್ಮ ಪೋರ್ಟಲ್‌ಗಳಲ್ಲಿ ಪ್ರಕಟಿಸಬೇಕು ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ನಿರ್ದೇಶಿಸಿದೆ.

ವಿಶ್ವವಿದ್ಯಾಲಯಗಳು ಅಥವಾ ಉನ್ನತ ಶಿಕ್ಷಣ ಸಂಸ್ಥೆಗಳು ಸಾರ್ವಜನಿಕರಿಗೆ ಅಗತ್ಯವಿರುವ ಮಾಹಿತಿಗಳನ್ನು ತಮ್ಮ ವೆಬ್‌ಸೈಟ್‌ಗಳಲ್ಲಿ ಕಡ್ಡಾಯವಾಗಿ ಬಹಿರಂಗಪಡಿಸಬೇಕು ಎಂದು ಯುಜಿಸಿ ಹೇಳಿದೆ.

ಸಂಸ್ಥೆಯ ಆಡಳಿತಾತ್ಮಕ ಮತ್ತು ಶೈಕ್ಷಣಿಕ ಮುಖ್ಯಸ್ಥರ ಚಿತ್ರ ಸಹಿತ ವ್ಯಕ್ತಿ ವಿವರಗಳು, ಒಂಬುಡ್ಸ್‌ಮನ್ ವಿವರ, ಆಂತರಿಕ ಗುಣಮಟ್ಟ ಭರವಸೆ ಕೋಶ, ದೂರು ನಿರ್ವಹಣಾ ಸಮಿತಿ, ರ್‍ಯಾಗಿಂಗ್ ತಡೆ ಕೋಶ, ಸಮಾನ ಅವಕಾಶ ಘಟಕ ಸೇರಿದಂತೆ ಹಲವು ಘಟಕಗಳ ಮಾಹಿತಿಯನ್ನು ಪ್ರಕಟಿಸಬೇಕು. ಶೈಕ್ಷಣಿಕ ಕಾರ್ಯಕ್ರಮಗಳು, ಸಂಸ್ಥೆಯ ಅಭಿವೃದ್ದಿ ಯೋಜನೆ ಮತ್ತು ವಿದೇಶಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಸಂಬಂಧಿಸಿದ ಮಾರ್ಗಸೂಚಿಯನ್ನು ಪೋರ್ಟಲ್‌ಗಳಲ್ಲಿ ಪ್ರಕಟಿಸಬೇಕು ಎಂದು ಯುಜಿಸಿ ತಿಳಿಸಿದೆ.

‘ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ವೆಬ್‌ಸೈಟ್‌ಗಳಲ್ಲಿ ಅತ್ಯಗತ್ಯವೆನಿಸುವ ಮೂಲ ಮಾಹಿತಿಗಳು ಇರಲೇಬೇಕು. ಹಲವು ಸಂಸ್ಥೆಗಳ ವೆಬ್‌ಗಳು ಮಾಹಿತಿ ಕೊರತೆಯಿಂದ ಕೂಡಿವೆ. ಕೆಲವಂತೂ ಕಾರ್ಯವೇ ನಿರ್ವಹಿಸುತ್ತಿಲ್ಲ. ಇನ್ನೂ ಕೆಲವು ಅಪ್‌ಡೇಟ್ ಆಗಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅನಾನುಕೂಲ ಆಗುತ್ತಿವೆ’ ಎಂದು ಯುಜಿಸಿ ಅಧ್ಯಕ್ಷ ಎಂ. ಜಗದೀಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.