ಗುವಾಹಟಿ: ಗಣರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಇಲ್ಲಿನ ಮಾರುಕಟ್ಟೆಯೊಂದರ ಸಮೀಪದಲ್ಲಿ ಉಂಟಾದ ಭಾರಿ ಶಬ್ದವು ಜನರಲ್ಲಿ ಭೀತಿ ಸೃಷ್ಟಿಸಿತು. ಇದರಿಂದಾಗಿ ಭದ್ರತಾ ವ್ಯವಸ್ಥೆಯ ಬಗ್ಗೆ ಗೊಂದಲಗಳು ಸೃಷ್ಟಿಯಾದವು.

ನುಸುಳುಕೋರರ ಗುಂಪಾಗಿರುವ ಉಲ್ಫಾ–ಐ, ಸಾಂಕೇತಿಕ ಪ್ರತಿಭಟನೆಯಾಗಿ ತಾನು ಕಚ್ಚಾ ಬಾಂಬ್ ಸ್ಫೋಟಿಸಿರುವುದಾಗಿ ಹೇಳಿದೆ. ಆದರೆ, ಸಂಘಟನೆ ಹೇಳಿದ್ದನ್ನು ಪೊಲೀಸರು ಒಪ್ಪಿಲ್ಲ. ಸ್ಫೋಟಕ್ಕೆ ಕಾರಣ ಏನು ಎಂಬುದರ ತನಿಖೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ನಗರದ ತರಕಾರಿ ಮಾರುಕಟ್ಟೆಯ ಸನಿಹದಲ್ಲಿ ಸಾರ್ವಜನಿಕರು ತ್ರಿವರ್ಣ ಧ್ವಜಾರೋಹಣಕ್ಕೆ ಸೇರಿದ್ದರು. ಬೆಳಿಗ್ಗೆ 7.45ರ ಸುಮಾರಿಗೆ ಉಂಟಾದ ಭಾರಿ ಸದ್ದು ಜನರಲ್ಲಿ ಆತಂಕ ಮೂಡಿಸಿತು. ಪೊಲೀಸರು ಸ್ಥಳಕ್ಕೆ ಧಾವಿಸಿದರಾದರೂ ಭಾರಿ ಸದ್ದಿಗೆ ಕಾರಣ ಏನು ಎಂಬುದು ಅವರಿಗೆ ಸ್ಪಷ್ಟವಾಗಲಿಲ್ಲ.

ಜನರು ಮುಂದಿನ ದಿನಗಳಲ್ಲಿ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಬಾರದು ಎಂಬ ಸಂದೇಶ ರವಾನಿಸಲು ಕಚ್ಚಾ ಬಾಂಬ್ ಸ್ಫೋಟಿಸಿರುವುದಾಗಿ ಉಲ್ಫಾ–ಐ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.