‘ಧಾರಾವಿಯನ್ನು ಮರು ಅಭಿವೃದ್ಧಿಗೊಳಿಸುವ ಯೋಜನೆಗಾಗಿ ದುಬೈ ಮೂಲದ ಸೆಕ್‌ಲಿಂಕ್ ಟೆಕ್ನಾಲಜಿ ಕಾರ್ಪೊರೇಷನ್ ₹7,200 ಕೋಟಿ ಮೊತ್ತದ ಬಿಡ್ ಸಲ್ಲಿಸಿತ್ತು. ಅದಾನಿ ಇನ್‌ಫ್ರಾಸ್ಟ್ರಕ್ಚರ್ ಕಂಪನಿಯನ್ನು ಹಿಂದಿಕ್ಕಿದ್ದ ಸೆಕ್‌ಲಿಂಕ್, 2018ರ ನವೆಂಬರ್‌ನಲ್ಲಿ ಟೆಂಡರ್ ಜಯಿಸಿತ್ತು. ರೈಲ್ವೆ ಭೂಮಿ ಹಸ್ತಾಂತರಕ್ಕೆ ತೊಡಕು ಉಂಟಾಗಿರುವ ಕಾರಣ ನೀಡಿ 2020ರ ನವೆಂಬರ್‌ನಲ್ಲಿ ಟೆಂಡರ್ ರದ್ದುಗೊಳಿಸಲಾಗಿತ್ತು’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಟೀಕಿಸಿದ್ದಾರೆ.