ಕಾಂಗ್ರೆಸ್ ನಾಯಕರು ಮೂರನೇ ಹಂತದ ನಂತರ ಗೆಲುವಿನ ಸ್ಥಾನಗಳಿಗಾಗಿ ಭೂತಗನ್ನಡಿ ಹಾಕಿ ಹುಡುಕುತ್ತಿದ್ದಾರೆ. ನಾಲ್ಕನೇ ಹಂತದಲ್ಲಿ ಅವರು ‘ಸೂಕ್ಷ್ಮದರ್ಶಕ’ದ (ಮೈಕ್ರೋಸ್ಕೋಪ್) ಮೂಲಕ ಹುಡುಕಬೇಕು.ನರೇಂದ್ರ ಮೋದಿ, ಪ್ರಧಾನಿ
ಸಾಮಾನ್ಯವಾಗಿ ನೀವು ಅದಾನಿ ಮತ್ತು ಅಂಬಾನಿ ಬಗ್ಗೆ ಗುಪ್ತವಾಗಿ ಮಾತನಾಡುತ್ತೀರಿ. ಮೊದಲ ಬಾರಿಗೆ ಅವರ ಹೆಸರನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸಿದ್ದೀರಿ. ಅವರು (ಕಾಂಗ್ರೆಸ್‌ಗಾಗಿ) ಟೆಂಪೊಗಳಲ್ಲಿ ಹಣ ಒಯ್ಯುತ್ತಾರೆ ಎನ್ನುವುದೂ ನಿಮಗೆ ಗೊತ್ತಿದೆ. ಅದು ನಿಮ್ಮ ವೈಯಕ್ತಿಕ ಅನುಭವವೇ? ಒಂದು ಕೆಲಸ ಮಾಡಿ, ಇ.ಡಿ–ಸಿಬಿಐ ಅನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ತನಿಖೆಗೆ ಕಳುಹಿಸಿರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ಚುನಾವಣೆಯ ಉಬ್ಬರ–ಇಳಿತ ಎಷ್ಟು ‘ಹಿಂಸಾತ್ಮಕ’ವಾಗಿ ಬದಲಾಗಿದೆ ಎಂದರೆ ‘ಹಮ್ ದೋ ಹಮಾರೆ ದೋ’; ‘ಪಪ್ಪ’ನೇ ತನ್ನ ಮಕ್ಕಳ ವಿರುದ್ಧ ತಿರುಗಿಬಿದ್ದಿದ್ದಾನೆ.ಜೈರಾಮ್ ರಮೇಶ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಮೂರು ಹಂತಗಳ ಚುನಾವಣೆಯ ನಂತರ ಮೋದಿ ಕ್ಷೋಭೆಗೊಂಡಿದ್ದಾರೆ. ನೆಲ ನಡುಗುತ್ತಿದೆ ಎಂದು ಅರಿತುಕೊಂಡಿದ್ದಾರೆ. ತಮ್ಮ ‘ಸ್ನೇಹಿತ’ರಿಂದ ₹8200 ಕೋಟಿ ಸಂಗ್ರಹಿಸಿದ ಪ್ರಧಾನಿ ಮೋದಿ ಚುನಾವಣೆಯಲ್ಲಿ ಸೋಲುತ್ತಿರುವ ಗಳಿಗೆಯಲ್ಲಿ ಅವರ ವಿರುದ್ಧ ತಿರುಗಿಬಿದ್ದಿದ್ದಾರೆಪವನ್ ಖೇರಾ ಕಾಂಗ್ರೆಸ್ ಮುಖಂಡ
ಇಬ್ಬರು ದೊಡ್ಡ ಉದ್ಯಮಿಗಳ ವಿರುದ್ಧ ಪ್ರಧಾನಿ ಮೋದಿ ಭ್ರಷ್ಟಾಚಾರದ ಗಂಭೀರ ಆರೋಪ ಮಾಡುತ್ತಿದ್ದಾರೆ. ಸಿಬಿಐ ಇ.ಡಿ ಆದಾಯ ತೆರಿಗೆ ಅಧಿಕಾರಿಗಳು ಎಂದು ಅವರ ಮೇಲೆ ದಾಳಿ ನಡೆಸಲಿದ್ದಾರೆ?ಸುಪ್ರಿಯಾ ಶ್ರೀನೆತ್ ಕಾಂಗ್ರೆಸ್ ನಾಯಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.