ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಟ್ಟ ಕೆಲಸ ಮರೆಮಾಚಲು ಕಪ್ಪುಪತ್ರ: ಬಿಜೆಪಿ ಲೇವಡಿ

Published 8 ಫೆಬ್ರುವರಿ 2024, 18:10 IST
Last Updated 8 ಫೆಬ್ರುವರಿ 2024, 18:10 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಾಂಗ್ರೆಸ್ ಬಿಡುಗಡೆ ಮಾಡಿರುವ ‘ಕಪ್ಪು ಪತ್ರ’ಕ್ಕೆ ಬಿಜೆಪಿ ತಿರುಗೇಟು ನೀಡಿದೆ. ಕಾಂಗ್ರೆಸ್ ಪಕ್ಷವು ತನ್ನ ಕೆಟ್ಟ ಕೆಲಸಗಳನ್ನು ಮರೆಮಾಚಲು ಇದನ್ನು ಹೊರತಂದಿದೆ ಎಂದು ಬಿಜೆಪಿ ದೂರಿದೆ. ಅಲ್ಲದೆ, ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳುವುದು ನಿಲ್ಲಲಿ ಎಂಬ ಬಯಕೆ ಕಾಂಗ್ರೆಸ್ಸಿಗೆ ಇದೆ ಎಂದು ಆರೋಪಿಸಿದೆ.

‘ಆದರೆ ಇದು ಸಾಧ್ಯವಾಗದ್ದು. ಭ್ರಷ್ಟಾಚಾರದ ವಿಚಾರದಲ್ಲಿ ರಾಜಿ ಇಲ್ಲ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರ ಹಣವನ್ನು ಲೂಟಿ ಮಾಡಿದವರಿಗೆ ಸ್ಥಾನ ಇಲ್ಲ. ಕಾಂಗ್ರೆಸ್ಸಿನವರ ಕೆಟ್ಟ ಕೆಲಸಗಳನ್ನು ನಾವು ಜನರ ಮುಂದೆ ಬಯಲುಮಾಡಲಿದ್ದೇವೆ’ ಎಂದು ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಅವರು ಹೇಳಿದ್ದಾರೆ.

ಭ್ರಷ್ಟಾಚಾರದಲ್ಲಿ ತೊಡಗಿದ್ದವರು, ಕೋಟ್ಯಂತರ ರೂಪಾಯಿ ಮೊತ್ತದ ಹಗರಣಗಳ ಹಿಂದೆ ಇದ್ದವರು ಈಗ ಕಪ್ಪು ಪತ್ರ ಹೊರತರುತ್ತಿದ್ದಾರೆ ಎಂದು ಪ್ರಸಾದ್ ಅವರು ವ್ಯಂಗ್ಯವಾಡಿದರು. 

ಅಗತ್ಯವಸ್ತುಗಳ ಬೆಲೆ ಹೆಚ್ಚಾಗಿದೆ, ನಿರುದ್ಯೋಗ ಹೆಚ್ಚಾಗಿದೆ ಎಂದು ಕಾಂಗ್ರೆಸ್ ಮಾಡಿರುವ ಆರೋಪವನ್ನು ಅವರು ಅಲ್ಲಗಳೆದರು. ಮೋದಿ ನೇತೃತ್ವದ ಸರ್ಕಾರವು ಬಹಳಷ್ಟು ಉದ್ಯೋಗ ಸೃಷ್ಟಿಸಿದೆ, ಹಣದುಬ್ಬರದ ಸಮಸ್ಯೆಯನ್ನು ಯುಪಿಎ ಸರ್ಕಾರಕ್ಕಿಂತ ಹೆಚ್ಚು ಚೆನ್ನಾಗಿ ನಿರ್ವಹಿಸಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT