ನವದೆಹಲಿ: ವಿರೋಧ ಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ಕುರಿತು ಪಿ.ಚಿದಂಬರಂ ನೀಡಿದ ಹೇಳಿಕೆಗಳನ್ನು ಉಲ್ಲೇಖಿಸಿ ಕಾಂಗ್ರೆಸ್ನ ಕಾಲೆಳೆದಿರುವ ಬಿಜೆಪಿ, ‘ಪಕ್ಷಕ್ಕೆ ಭವಿಷ್ಯ ಇಲ್ಲ ಎಂಬುದು ರಾಹುಲ್ ಗಾಂಧಿ ಅವರ ಆಪ್ತರಿಗೂ ಗೊತ್ತಿದೆ’ ಎಂದು ಶುಕ್ರವಾರ ಕುಟುಕಿದೆ.

‘ಮೈತ್ರಿಕೂಟದ ನಾಯಕರು ತಮ್ಮ ಸ್ವಹಿತಾಸಕ್ತಿಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಒಟ್ಟಾಗಿದ್ದಾರೆಯೇ ಹೊರತು, ಜನರ ಸೇವೆ ಮಾಡಲು ಅಲ್ಲ ಎಂಬುದು ಎಲ್ಲರಿಗೂ ಅರ್ಥವಾಗಿದೆ. ಹೀಗಾಗಿ, ಮತದಾರರು ‘ದುರಹಂಕಾರ’ದ ಮೈತ್ರಿಕೂಟವನ್ನು ತಿರಸ್ಕರಿಸಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಆರೋಪಿಸಿದ್ದಾರೆ.

ಕಾಂಗ್ರೆಸ್ ಹಿರಿಯ ನಾಯಕ ಸಲ್ಮಾನ್ ಖುರ್ಷೀದ್ ಹಾಗೂ ಮೃತ್ಯುಂಜಯ ಸಿಂಗ್ ಯಾದವ್ ರಚಿಸಿರುವ ‘ಕಂಟೆಸ್ಟಿಂಗ್ ಡೆಮಾಕ್ರಟಿಕ್ ಡೆಫಿಸಿಟ್’ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದ ಕಾಂಗ್ರೆಸ್ನ ಹಿರಿಯ ನಾಯಕ ಪಿ.ಚಿದಂಬರಂ, ‘ಮೃತ್ಯುಂಜಯ ಸಿಂಗ್ ಹೇಳಿರುವ ಹಾಗೆ, ‘ಇಂಡಿಯಾ’ ಕೂಟದ ಭವಿಷ್ಯ ಉಜ್ವಲ ಇಲ್ಲ. ಈ ಮೈತ್ರಿಕೂಟವು ಒಗ್ಗಟ್ಟಾಗಿದೆ ಎಂದು ಅನಿಸಿದರೂ, ಆ ಬಗ್ಗೆ ನನಗೆ ಖಾತ್ರಿ ಇಲ್ಲ’ ಎಂದು ಹೇಳಿದ್ದರು.

‘ಮೈತ್ರಿಕೂಟ ಒಗ್ಗಟ್ಟಿನಿಂದ ಇದೆಯೇ? ಹೌದು ಎಂದಾದಲ್ಲಿ ನನಗೆ ಸಂತೋಷವಾಗುತ್ತದೆ. ಆದರೆ, ಹಾಗೆ ಕಾಣುತ್ತಿಲ್ಲ. ಸಲ್ಮಾನ್ ಖುರ್ಷೀದ್ ಅವರು ಇಂಡಿಯಾ ಮೈತ್ರಿಕೂಟ ರಚನೆಗೆ ಸಂಬಂಧಿಸಿ ನಡೆದ ಮಧ್ಯಸ್ಥಿಕೆಯ ಭಾಗವಾಗಿದ್ದರು. ಹೀಗಾಗಿ, ಅವರೇ ಈ ಪ್ರಶ್ನೆಗೆ ಉತ್ತರಿಸಬೇಕು’ ಎಂದೂ ಚಿದಂಬರಂ ಹೇಳಿದ್ದರು.

ಕಾಂಗ್ರೆಸ್ನ ಹಿರಿಯ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಗೌರವ್ ಭಾಟಿಯಾ,‘ ಭಾರತ ವಿರೋಧಿ, ಪ್ರಧಾನಿ ನರೇಂದ್ರ ಮೋದಿ ಅವರ ನಿಂದನೆ ಹಾಗೂ ಸಶಸ್ತ್ರ ಪಡೆಗಳ ಮನೋಸ್ಥೈರ್ಯ ಕುಂದಿಸುವಂತಹ ನಿಲುವು ಹೊಂದಿದ್ದ ‘ಇಂಡಿಯಾ’ ಒಕ್ಕೂಟದ ಏಕೈಕ ಉದ್ದೇಶ ಅಧಿಕಾರ ಹಿಡಿಯುವುದಾಗಿತ್ತು’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ಇಂಡಿಯಾ ಮೈತ್ರಿಕೂಟ ಅಸ್ತಿತ್ವದಲ್ಲಿಯೇ ಇಲ್ಲ ಎಂದು ಈಗ ಚಿದಂಬರಂ ಅವರೇ ಹೇಳಿದ್ದಾರೆ’ ಎಂದೂ ಭಾಟಿಯಾ ಕುಟುಕಿದ್ದಾರೆ.

ವಿರೋಧ ಪಕ್ಷಗಳು ಭವಿಷ್ಯದಲ್ಲಿ ಒಂದಾಗುವುದಿಲ್ಲ ಹಾಗೂ ಬಿಜೆಪಿ ಸಮರ್ಥ ಸಂಘಟನೆ ಎಂದು ಚಿದಂಬರಂ ಭವಿಷ್ಯ ನುಡಿದಿದ್ದಾರೆ
ಪ್ರದೀಪ್ ಭಂಡಾರಿ ಬಿಜೆಪಿ ವಕ್ತಾರ

ಕುಟುಂಬ ರಾಜಕಾರಣ ಮಾಡುವ ಪಕ್ಷಗಳು ಮಾಡಿಕೊಂಡ ಮೈತ್ರಿಕೂಟವಿದು. ದೇಶದ ಪ್ರಗತಿಗಾಗಿ ಅದು ಯಾವುದೇ ಸಿದ್ಧಾಂತ ಮುನ್ನೋಟ ಹೊಂದಿಲ್ಲ
ರಾಜೀವ್ ಚಂದ್ರಶೇಖರ್ ಬಿಜೆಪಿ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.