ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಣೆ | ಅಧಿಕಾರಿಗೆ ಅವಾಚ್ಯ ಪದಗಳಿಂದ ನಿಂದನೆ: ಕಾಂಗ್ರೆಸ್‌ ಶಾಸಕನ ವಿರುದ್ಧ ದೂರು

Published 30 ಜನವರಿ 2024, 13:42 IST
Last Updated 30 ಜನವರಿ 2024, 13:42 IST
ಅಕ್ಷರ ಗಾತ್ರ

ಪುಣೆ: ಇಲ್ಲಿ ನೀರಿನ ಟ್ಯಾಂಕ್‌ ಒಂದರ ಉದ್ಘಾಟನೆ ವೇಳೆ ಸ್ಥಳೀಯ ಅಧಿಕಾರಿಯನ್ನು ನಿಂದಿಸಿದ ಹಾಗೂ ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ಕಾಂಗ್ರೆಸ್ ಶಾಸಕ ರವೀಂದ್ರ ದಂಗೇಕರ್‌ ವಿರುದ್ಧ ದೂರು ದಾಖಲಾಗಿದೆ.

ಅಧಿಕಾರಿಯ ದೂರಿನ ಮೇರೆಗೆ ಐಪಿಸಿಯ ಸೆಕ್ಷನ್‌ 353 ಹಾಗೂ 294ರಡಿ ದೂರು ದಾಖಲಾಗಿದೆ ಎಂದು ಚತುರ್ಶೃಂಗಿ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪುಣೆ ನಗರ ಪಾಲಿಕೆಯ ನೀರು ಸರಬರಾಜು ವಿಭಾಗದ ಮುಖ್ಯಸ್ಥ ನಂದಕಿಶೋರ್‌ ಜಗ್‌ತಾಪ್‌ ಅವರು ದೂರು ದಾಖಲಿಸಿದ್ದಾರೆ. ಗೋಖಲೆನಗರದ ಆಶಾ ನಗರದಲ್ಲಿ ಜ.24ರಂದು ಓವರ್‌ಹೆಡ್ ಟ್ಯಾಂಕ್ ಉದ್ಘಾಟನೆ ವೇಳೆ ಈ ಘಟನೆ ನಡೆದಿದೆ.

ಯೋಜನೆಯನ್ನು ತಾನು ಮಾಡಿದ್ದಾಗಿ ಬಿಜೆಪಿ ಲಾಭ ಪಡೆದುಕೊಳ್ಳುತ್ತಿದೆ ಎಂದು ಉದ್ಘಾಟನೆ ವೇಳೆ ಸ್ಥಳೀಯ ಕಾಂಗ್ರೆಸ್‌ ಮುಖಂಡರು ತಗಾದೆ ತೆಗೆದಿದ್ದರು. ಯಾವುದೇ ಗಲಾಟೆಯಾಗಬಾರದು ಎಂದು ಯೋಜನೆಯ ಉದ್ಘಾಟನೆಗೆ ಆಗಮಿಸುತ್ತಿದ್ದ ಶಾಸಕ ರವೀಂದ್ರ ದಂಗೇಕರ್‌ ಅವರನ್ನು ನಾವು ತಡೆದವು. ಮಾತಿನ ಚಕಮಕಿ ವೇಳೆ ಶಾಸಕರು ಅವಾಚ್ಯ ಪದಗಳನ್ನು ಬಳಸಿದ್ದಾರೆ ಎಂದು ಜಗ್‌ತಾಪ್‌ ದೂರಿದ್ದಾರೆ.

ದಂಗೇಕರ್ ಅವರು ಪುಣೆಯ ಕಸಬಾಪೇಟೆ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT