ನವದೆಹಲಿ: ದೇಶಕ್ಕೆ ಪರಿವರ್ತನೆಯ ಸಮಯದಲ್ಲಿ ಸಂವಿಧಾನವು ದಾರಿದೀಪವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಬಣ್ಣಿಸಿದರು.

ಸಂವಿಧಾನ ದಿನಾಚರಣೆಯ ಅಂಗವಾಗಿ ಸುಪ್ರೀಂ ಕೋರ್ಟ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ಸರ್ಕಾರವು ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ತರಲು ಹಲವು ಕಲ್ಯಾಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಾಂವಿಧಾನಿಕ ಮೌಲ್ಯಗಳನ್ನು ಬಲಪಡಿಸಿದೆ ಎಂದು ಪ್ರತಿಪಾದಿಸಿದರು.

ತುರ್ತು ಪರಿಸ್ಥಿತಿಯ ಸವಾಲು ಸೇರಿದಂತೆ ದೇಶದ ಅಗತ್ಯತೆಗಳು ಮತ್ತು ನಿರೀಕ್ಷೆಗಳನ್ನು ಈಡೇರಿಸುತ್ತಾ ಜೀವಂತವಾಗಿರುವ ಸಂವಿಧಾನವು ‘ಹರಿಯುವ ನದಿ’ ಎನಿಸಿದೆ. ಅಲ್ಲದೆ, ಇದು ಬದಲಾಗುತ್ತಿರುವ ಕಾಲದಲ್ಲೂ ರಾಷ್ಟ್ರಕ್ಕೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸುತ್ತದೆ ಎಂದು ಬಣ್ಣಿಸಿದರು.

1949ರ ನವೆಂಬರ್ 26ರಂದು ಸಂವಿಧಾನ ಸಭೆಯಲ್ಲಿ ರಾಜೇಂದ್ರ ಪ್ರಸಾದ್ ಅವರು ತಮ್ಮ ಸಮಾರೋಪ ಭಾಷಣದಲ್ಲಿ ಹೇಳಿದ ಮಾತುಗಳನ್ನು ಸ್ಮರಿಸಿದ ಮೋದಿ, ದೇಶದ ಹಿತಾಸಕ್ತಿಗಳನ್ನು ಕಾಪಾಡುವ ಪ್ರಾಮಾಣಿಕ ಜನರ ಗುಂಪಿಗಿಂತ ಭಾರತಕ್ಕೆ ಹೆಚ್ಚೇನೂ ಅಗತ್ಯವಿಲ್ಲ. ‘ದೇಶ ಮೊದಲು’ ಎಂಬ ಈ ಭಾವನೆಯು ಮುಂದಿನ ಶತಮಾನಗಳ ಕಾಲ ಸಂವಿಧಾನವನ್ನು ಜೀವಂತವಾಗಿರಿಸುತ್ತದೆ ಎಂದರು.

‘ಭಾರತದ ಆಕಾಂಕ್ಷೆಗಳು, ಭಾರತದ ಕನಸುಗಳು ಕಾಲಾನಂತರದಲ್ಲಿ ಹೊಸ ಎತ್ತರವನ್ನು ತಲುಪುತ್ತವೆ ಎಂದು ನಮ್ಮ ಸಂವಿಧಾನ ನಿರ್ಮಾತೃಗಳಿಗೆ ತಿಳಿದಿತ್ತು. ಸ್ವತಂತ್ರ ಭಾರತದ ಅಗತ್ಯಗಳು ಮತ್ತು ಅದರ ನಾಗರಿಕರ ಅಗತ್ಯಗಳು ಬದಲಾಗುತ್ತವೆ, ಸವಾಲುಗಳು ಬದಲಾಗುತ್ತವೆ ಎಂಬುದರ ಅರಿವು ಅವರಿಗೆ ಇತ್ತು. ಆದ್ದರಿಂದ ಅವರು ನಮ್ಮ ಸಂವಿಧಾನವನ್ನು ಕೇವಲ ಪುಸ್ತಕವಾಗಿ ಬಿಡಲಿಲ್ಲ. ಕಾನೂನುಗಳ ಬದಲಿಗೆ, ಅವರು ಅದನ್ನು ಜೀವಂತವಾಗಿ, ನಿರಂತರವಾಗಿ ಹರಿಯುವ ನದಿಯಂತಿಟ್ಟರು’ ಎಂದು ಮೋದಿ ವರ್ಣಿಸಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಈಗ ಸಂವಿಧಾನವನ್ನು ಸಂಪೂರ್ಣವಾಗಿ ಜಾರಿಗೊಳಿಸಲಾಗಿದೆ. ಅಲ್ಲಿ ಮೊದಲ ಬಾರಿಗೆ ಸಂವಿಧಾನ ದಿನವನ್ನು ಆಚರಿಸಲಾಯಿತು ಎಂದೂ ಮೋದಿ ಹೇಳಿದರು.

2008ರಲ್ಲಿ ಇದೇ ದಿನದಂದು ಸಂಭವಿಸಿದ ಮುಂಬೈ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ, ಭದ್ರತೆಗೆ ಸವಾಲೊಡ್ಡುವ ಎಲ್ಲಾ ಭಯೋತ್ಪಾದಕ ಗುಂಪುಗಳಿಗೆ ತಕ್ಕ ಉತ್ತರವನ್ನು ನೀಡುವುದು ದೇಶದ ಸಂಕಲ್ಪವಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.