ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ: ಪೊಲೀಸ್‌ ಠಾಣೆಯಲ್ಲಿ ದಲಿತ ವ್ಯಕ್ತಿಗೆ ಥಳಿತ; ಪ್ರಕರಣ ದಾಖಲು

Published 26 ಸೆಪ್ಟೆಂಬರ್ 2023, 2:08 IST
Last Updated 26 ಸೆಪ್ಟೆಂಬರ್ 2023, 2:08 IST
ಅಕ್ಷರ ಗಾತ್ರ

ಪ್ರಯಾಗರಾಜ: ವಿಚಾರಣೆ ಸಂಬಂಧ ಪೊಲೀಸ್ ಠಾಣೆಗೆ ಕರೆಯಿಸಿ ದಲಿತ ವ್ಯಕ್ತಿಗೆ ಥಳಿಸಿದ ಆರೋಪದ ಮೇಲೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

‘ರಾಮಶಂಕರ್ ತ್ರಿಪಾಠಿ ಎಂಬುವವರು ತನ್ನ 18 ವರ್ಷದ ಮಗಳು ನಾಪತ್ತೆಯಾಗಿರುವ ಬಗ್ಗೆ ಸೊರನ್ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ 19ರಂದು ದೂರು ದಾಖಲಿಸಿದ್ದರು. ಇದರ ತನಿಖೆಯನ್ನು ಸಬ್ ಇನ್ಸ್‌ಪೆಕ್ಟರ್ ಸುನೀಲ್ ಕುಮಾರ್ ನಡೆಸುತ್ತಿದ್ದರು’ ಎಂದು ಸಹಾಯಕ ಪೊಲೀಸ್ ಆಯುಕ್ತ (ಸೊರಾನ್) ಶೈಲೇಂದ್ರ ತಿಳಿಸಿದ್ದಾರೆ.

‘ವಿಚಾರಣೆ ವೇಳೆ ಹುಡುಗಿಯ ಕರೆ ವಿವರಗಳ ದಾಖಲೆಗಳನ್ನು ಪರಿಶೀಲಿಸಿದ ಸುನೀಲ್‌ ಕುಮಾರ್‌, ಶನಿವಾರ ಧರ್ಮೇಂದ್ರ ಕುಮಾರ್ ಎಂಬಾತನನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆಸಿದ್ದರು. ಇದಾದ ಮರುದಿನ ಧರ್ಮೇಂದ್ರ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು’ ಎಂದರು.

‘ವೈದ್ಯಕೀಯ ಪರೀಕ್ಷೆ ವೇಳೆ ಧರ್ಮೇಂದ್ರ ಅವರ ಮೇಲೆ ಸುತ್ತಿಗೆ, ಲಾಟಿ ಅಂತಹ ಹರಿತವಿಲ್ಲದ ಯಾವುದೋ ಒಂದು ವಸ್ತುವಿನಿಂದ ಹೊಡೆಯಲಾಗಿದೆ ಎಂದು ತಿಳಿದುಬಂದಿದೆ. ಇದೀಗ ಅವರ ಆರೋಗ್ಯ ಸುಧಾರಿಸುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT