ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ತಿಂಗಳು ದೇಶದಲ್ಲಿ ಎಮರ್ಜೆನ್ಸಿ: ಅಪ್ಪಟ ಸುಳ್ಳು ಎಂದ ಭಾರತೀಯ ಸೇನೆ

Last Updated 31 ಮಾರ್ಚ್ 2020, 1:46 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ವೈರಸ್‌ ಸೋಂಕು ತಡೆಗಾಗಿ ಏಪ್ರಿಲ್‌ನಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಲಿದೆ, ಸೇನೆ ನಿಯೋಜನೆಯಾಗಲಿದೆ ಎಂದೆಲ್ಲ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದು ಊಹಾಪೋಹಗಳಷ್ಟೇ; ಎಲ್ಲ ಸುಳ್ಳು ಸುದ್ದಿ ಎಂದು ಭಾರತೀಯ ಸೇನೆ ಸಾಮಾಜಿಕ ಮಾಧ್ಯಮದ ಮೂಲಕವೇ ತಳ್ಳಿ ಹಾಕಿದೆ.

'ದುರುದ್ದೇಶಪೂರಿತ ಹಾಗೂ ಸುಳ್ಳು ಸಂದೇಶಗಳು ಸಾಮಾಜಿಕ ಮಾಧ್ಯಗಳಲ್ಲಿ ಹರಿದಾಡುತ್ತಿದ್ದು, ಏಪ್ರಿಲ್‌ ಮಧ್ಯ ಭಾಗದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡುವ ಸಾಧ್ಯತೆ ಇದೆ. ಹಾಗೂ ಭಾರತೀಯ ಸೇನೆ, ಮಾಜಿ ಯೋಧರು, ಎನ್‌ಸಿಸಿ, ಎನ್‌ಎಸ್‌ಎಸ್‌ ನಿಯೋಜನೆ ಮಾಡಲಿದೆ. –ಇವೆಲ್ಲ ಅಪ್ಪಟ ಸುಳ್ಳು ಎಂಬುದನ್ನು ಈ ಮೂಲಕ ಖಚಿತ ಪಡಿಸುತ್ತಿದ್ದೇವೆ.' ಎಂದು ಭಾರತೀಯ ಸೇನೆ ಟ್ವೀಟಿಸಿದೆ.

ಕೊರೊನಾ ವೈರಸ್‌ಗೆ ಸಂಬಂಧಿಸಿದ ಬಹಳಷ್ಟು ಸುಳ್ಳು ಸುದ್ದಿಗಳು ಕಾಡ್ಗಿಚ್ಚಿನಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಿಸುತ್ತಿದ್ದು, ಹಲವು ಸಮಸ್ಯೆಗಳನ್ನು ಸೃಷ್ಟಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನಿ ಕೇರ್ಸ್ (CARES) ನಿಧಿ ಹೆಸರಿನಲ್ಲಿ ಫೇಕ್‌ ಖಾತೆ ತೆರೆದು, ಹಣ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಹಂಚಿಕೆಯಾಗಿದೆ. ಇದಕ್ಕೂ ಮುನ್ನ ಭಾರತದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆಯಾಗಲಿದೆ, ಹಣಕಾಸು ವರ್ಷವನ್ನು ವಿಸ್ತರಿಸಲಾಗುತ್ತದೆಎಂದುವರದಿಗಳು ಹಬ್ಬಿದ್ದವು. ಸರ್ಕಾರ ಅವೆಲ್ಲ ಸುಳ್ಳು ಎಂದು ತಳ್ಳಿ ಹಾಕಿದೆ.

ದೇಶವ್ಯಾಪಿ 21 ದಿನಗಳ ಲಾಕ್‌ಡೌನ್‌ ಘೋಷಣೆಯಾಗಿ ಆರು ದಿನ ಪೂರೈಸುತ್ತಿರುವ ಸಮಯದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯ ಕುರಿತು ಸ್ಪಷ್ಟೀಕರಣ ನೀಡಲಾಗಿದೆ. ದೇಶದಾದ್ಯಂತ ಒಟ್ಟು 1316 ಕೋವಿಡ್‌–19 ಪ್ರಕರಣಗಳು ದೃಢಪಟ್ಟಿವೆ. ಇವರಲ್ಲಿ ಸುಮಾರು 100 ಸೋಂಕಿತರು ಗುಣಮುಖರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT