ನವದೆಹಲಿ: ದೇಶದಲ್ಲಿಕೊರೊನಾ ವೈರಸ್ ಸೋಂಕು (ಕೋವಿಡ್–19) ತಗುಲಿರುವವರ ಸಂಖ್ಯೆಶನಿವಾರ ಬೆಳಿಗ್ಗೆ 871 ತಲುಪಿದ್ದು, ಅಮೆರಿಕದಲ್ಲಿ 1 ಲಕ್ಷ ದಾಟಿದೆ.

ಭಾರತದಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಅಮೆರಿಕದಲ್ಲಿ ಸೋಂಕಿನಿಂದ1,704 ಮಂದಿ ಮೃತಪಟ್ಟಿದ್ದು,ನ್ಯೂಯಾರ್ಕ್‌ನಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಮಹಾರಾಷ್ಟ್ರ, ಗುಜರಾತ್, ಶ್ರೀನಗರ ಮತ್ತು ಕರ್ನಾಟಕಗಳಲ್ಲಿ ಸೋಂಕಿನಿಂದ ಸಾವುಗಳು ಸಂಭವಿಸಿವೆ. ಗುಜರಾತ್‌ನಲ್ಲಿ ಶನಿವಾರ ಆರು ಹೊಸ ಪ್ರಕರಣ, ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ ಐದುಹೊಸ ಪ್ರಕರಣ ದೃಢಪಟ್ಟಿವೆ.

ಇದನ್ನೂ ಓದಿ:ಚಿಕ್ಕಬಳ್ಳಾಪುರದಲ್ಲಿ ಮತ್ತೆ 5 ಜನರಲ್ಲಿ ಕೋವಿಡ್-19 ದೃಢ, ಬಾಧಿತರ ಸಂಖ್ಯೆ 9ಕ್ಕೆ

ಗುಜರಾತ್‌ನಲ್ಲಿ ಮೂರು ಕೋವಿಡ್–19 ಪ್ರಕರಣಗಳು ಶುಕ್ರವಾರದೃಢಪಟ್ಟಿದ್ದು, ಆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 47ಕ್ಕೆ ಏರಿಕೆಯಾಗಿತ್ತು. ಹೊಸ ಪ್ರಕರಣಗಳೆಲ್ಲ ರಾಜ್‌ಕೋಟ್‌ನಲ್ಲಿ ಕಂಡುಬಂದಿವೆ ಎಂದು ಆರೋಗ್ಯ ಇಲಾಖೆ ಮುಖ್ಯ ಕಾರ್ಯದರ್ಶಿ ಜಯಂತಿ ರವಿ ತಿಳಿಸಿದ್ದರು.

ತಮಿಳುನಾಡಿನ 9 ಮಂದಿಯಲ್ಲಿ ಹೊಸದಾಗಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ.

ಪಶ್ಚಿಮ ಬಂಗಾಳದಲ್ಲಿ ಅನೇಕ ವಲಸೆ ಕಾರ್ಮಿಕರು ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಮರಳುತ್ತಿರುವುದು ಮತ್ತು ಹೋಂ ಕ್ವಾರಂಟೈನ್ ಉಲ್ಲಂಘಿಸುತ್ತಿರುವುದು ಸೋಂಕು ಹರಡುವಿಕೆ ಭೀತಿ ಹೆಚ್ಚಲು ಕಾರಣವಾಗಿದೆ.

ಶುಕ್ರವಾರ ಒಂದೇ ದಿನ 140ಕ್ಕೂ ಹೆಚ್ಚು ಪ್ರಕರಣ

ಶುಕ್ರವಾರ ಒಂದೇ ದಿನ ದೇಶದಲ್ಲಿ 140ಕ್ಕೂ ಹೆಚ್ಚು ಕೋವಿಡ್–19 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಆದರೆ, ಸರ್ಕಾರದ ಮಾಹಿತಿ ಪ್ರಕಾರ, ಶನಿವಾರ ಮುಂಜಾವ 3 ಗಂಟೆವರೆಗೆ 75 ಹೊಸ ಪ್ರಕರಣಗಳಷ್ಟೇ ದೃಢಪಟ್ಟಿವೆ.

ಇದನ್ನೂ ಓದಿ:ಕೊರೊನಾ: ರಾಜ್ಯದಲ್ಲಿ ಸಾವಿನ ಸಂಖ್ಯೆ 3ಕ್ಕೆ ಏರಿಕೆ

ಒಟ್ಟಾರೆಯಾಗಿ ಶನಿವಾರದ ವೇಳೆಗೆ 66 ಜನ ಗುಣಮುಖರಾಗಿ ಮನೆಗೆ ಮರಳಿದ್ದು, 14 ದಿನ ಕಡ್ಡಾಯವಾಗಿ ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.