ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bypoll Results 2023: 7 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ; 4ರಲ್ಲಿ BJP ಮುನ್ನಡೆ

Published 8 ಸೆಪ್ಟೆಂಬರ್ 2023, 6:41 IST
Last Updated 8 ಸೆಪ್ಟೆಂಬರ್ 2023, 6:41 IST
ಅಕ್ಷರ ಗಾತ್ರ

ನವದೆಹಲಿ: ಆರು ರಾಜ್ಯಗಳ ಏಳು ವಿಧಾನಸಭಾ ಕ್ಷೇತ್ರಗಳಿಗೆ ಮಂಗಳವಾರ ನಡೆದಿದ್ದ ಉಪಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು ಬಿಜೆಪಿ ನಾಲ್ಕು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಶುಕ್ರವಾರ ಬೆಳಗ್ಗೆ 8 ಗಂಟೆಗೆ ರಾಜ್ಯಗಳಲ್ಲಿ ಸ್ಥಾಪಿಸಲಾಗಿರುವ ಮತ ಕೇಂದ್ರಗಳಲ್ಲಿ ಎಣಿಕೆ ಆರಂಭವಾಗಿತ್ತು. 

ಉತ್ತರಾಖಂಡದ ಬಾಗೇಶ್ವರ್, ಉತ್ತರ ಪ್ರದೇಶದ ಘೋಸಿ, ಕೇರಳದ ಪುತ್ತುಪಲ್ಲಿ, ಪಶ್ಚಿಮ ಬಂಗಾಳದ ಧೂಪ್ಗುರಿ, ಜಾರ್ಖಂಡ್‌ನ ದುಮ್ರಿ ಮತ್ತು ತ್ರಿಪುರಾದ ಬಾಕ್ಸಾನಗರ ಮತ್ತು ಧನ್‌ಪುರ ಸೇರಿ ಏಳು ಸ್ಥಾನಗಳ ಮತ ಎಣಿಕೆ ನಡೆಯುತ್ತಿದೆ. 

ಉತ್ತರಾಖಂಡದ ಬಾಗೇಶ್ವರ್, ತ್ರಿಪುರಾದ ಬಾಕ್ಸಾನಗರ ಮತ್ತು ಧನ್‌ಪುರ, ಪಶ್ಚಿಮ ಬಂಗಾಳದ ಧೂಪ್ಗುರಿಯಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ. ಕೇರಳದ ಪುತ್ತುಪಲ್ಲಿಯಲ್ಲಿ ಕಾಂಗ್ರೆಸ್‌, ಉತ್ತರ ಪ್ರದೇಶದ ಘೋಸಿಯಲ್ಲಿ ಎಸ್‌ಪಿ ಮುನ್ನಡೆಯಲ್ಲಿವೆ.

ಈ ಏಳೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಕಾಂಗ್ರೆಸ್‌ ಮತ್ತು ಪ್ರಾದೇಶಿಕ ಪಕ್ಷಗಳು ಸವಾಲೊಡ್ಡಿವೆ. ಮಧ್ಯಾಹ್ನದ ವೇಳೆಗೆ ಫಲಿತಾಂಶ ಸಿಗಲಿದೆ ಎಂದು ಚುನಾವಣೆ ಅಧಿಕಾರಿಗಳು ಹೇಳಿದ್ದಾರೆ.

ಫಲಿತಾಂಶದ ವಿವರಗಳು ಅಪ್ಡೇಟ್‌ ಆಗುತ್ತಿರುತ್ತವೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT