ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜೈಲು ಸ್ಥಳಾಂತರ ವಿರೋಧಿಸಿದ್ದ ಅಬು ಅರ್ಜಿ ವಜಾ

Published 25 ಜೂನ್ 2024, 16:21 IST
Last Updated 25 ಜೂನ್ 2024, 16:21 IST
ಅಕ್ಷರ ಗಾತ್ರ

ಮುಂಬೈ: ತನ್ನನ್ನು ಮುಂಬೈನ ತಲೊಜಾ ಜೈಲಿನಿಂದ ಸ್ಥಳಾಂತರಿಸಿರುವುದರ ವಿರುದ್ಧ ಗ್ಯಾಂಗ್‌ಸ್ಟರ್‌ ಅಬು ಸಲೇಂ ಸಲ್ಲಿಸಿದ್ದ ಮನವಿಯನ್ನು ಇಲ್ಲಿನ ವಿಶೇಷ ಟಿಎಡಿಎ ನ್ಯಾಯಾಲಯವು ಮಂಗಳವಾರ ವಜಾ ಮಾಡಿದೆ. 

1993ರಲ್ಲಿ ಮುಂಬೈನಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿರುವ ಅಬು ತಲೊಜಾ ಜೈಲಿನಲ್ಲಿದ್ದರು. ಕೆಲವು ತಿಂಗಳುಗಳಲ್ಲಿ ಅಬು ತಾವು ಬಿಡುಗಡೆಯಾಗುತ್ತಿರುವ ಕಾರಣಕ್ಕೆ ತಮ್ಮನ್ನು ಕೊಲೆ ಮಾಡುವ ಉದ್ದೇಶದಿಂದ ತಲೊಜಾ ಜೈಲಿನಿಂದ ಸ್ಥಳಾಂತರಿಸಲಾಗಿದೆ ಎಂದು ಅರ್ಜಿ ಸಲ್ಲಿಸಿದ್ದರು. 

ಅಬುಗೆ ತಲೊಜಾ ಜೈಲು ಸುರಕ್ಷಿತವಾಗಿದೆ. ಮುಂಬೈನ ಇತರ ಜೈಲುಗಳಲ್ಲಿ ಪ್ರತಿಸ್ಫರ್ಧಿ ಗ್ಯಾಂಗ್‌ನವರು ಅವರ ಮೇಲೆ ದಾಳಿ ಮಾಡಬಹುದು ಎಂದು ಅರ್ಜಿಯಲ್ಲಿ ಹೇಳಿದ್ದರು.

ಆದರೆ, ಅಬು ಅವರಿದ್ದ ಜೈಲಿನಲ್ಲಿ ಮರುನಿರ್ಮಾಣ ಕಾರ್ಯ ನಡೆಯುತ್ತಿರುವುದರಿಂದ ಸ್ಥಳಾಂತರ ಮಾಡಲಾಗಿದೆ ಎಂದು ಜೈಲು ಆಡಳಿತವು ನ್ಯಾಯಾಲಯಕ್ಕೆ ತಿಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT