ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 13,788 ಜನರಲ್ಲಿ ಕೋವಿಡ್–19 ದೃಢಪಟ್ಟಿದ್ದು, ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 1,05,71,773ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ. ಇದೇ ವೇಳೆ 145 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 1,52,419ಕ್ಕೆ ತಲುಪಿದೆ.

ಸಚಿವಾಲಯದ ಮಾಹಿತಿ ಪ್ರಕಾರ ಭಾನುವಾರ ಗುಣಮುಖರಾದ 14,457 ಸೋಂಕಿತರೂ ಸೇರಿದಂತೆ ಈ ವರೆಗೆ ಒಟ್ಟು 1,02,11,342 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಗುಣಮುಖರಾದವರ ಪ್ರಮಾಣ ಶೇ. 96.59ಕ್ಕೆ ತಲುಪಿದ್ದರೆ, ಸಾವಿನ ದರ ಶೇ. 1.44ಕ್ಕೆ ಇಳಿದಿದೆ.

ದೇಶದಲ್ಲಿ ಇನ್ನೂ 2,08,012 ಸಾವಿರ ಸಕ್ರಿಯ ಪ್ರಕರಣಗಳು ಇವೆ. ಇದರಲ್ಲಿ ಅರ್ಧಕ್ಕೂ ಹೆಚ್ಚು ಪ್ರಕರಣಗಳು ಕೇರಳ (69,209) ಮತ್ತು ಮಹಾರಾಷ್ಟ್ರದಲ್ಲಿ (53,852) ಇವೆ ಎಂಬುದು ಗಮನಿಸಬೇಕಾದ ವಿಚಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.