ನವದೆಹಲಿ: ‘ಕೋವಿಡ್–19 ಲಸಿಕೆಯ ಕೊರತೆಯಿಂದ ದೇಶದಲ್ಲಿ ಲಸಿಕೆ ಕಾರ್ಯಕ್ರಮಕ್ಕೆ ತೀವ್ರ ಹಿನ್ನಡೆಯಾಗಿದೆ. ಹಲವು ರಾಜ್ಯಗಳು ಲಸಿಕೆ ಕೇಂದ್ರಗಳನ್ನು ಮುಚ್ಚಿವೆ ಎಂಬ ಹೇಳಿಕೆಗಳಲ್ಲಿ ಯಾವುದೇ ಸತ್ಯಾಂಶ ಇಲ್ಲ. ಅವೆಲ್ಲ ತಿರುಚಿದ ಹೇಳಿಕೆಗಳು’ ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ.ಪೌಲ್ ಗುರುವಾರ ಹೇಳಿದರು.

‘ಕೋವಿಡ್–19 ಲಸಿಕೆಯನ್ನು ಪೂರೈಸುವ ಸಂಬಂಧ ಫೈಜರ್ ಕಂಪನಿಯ ಪ್ರಸ್ತಾವನೆ ಕುರಿತಂತೆ ಕೇಂದ್ರ ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಕೋಟ್ಯಂತರ ಜನರ ಹಿತಾಸಕ್ತಿ ಹಾಗೂ ಲಸಿಕೆಯ ಗುಣಮಟ್ಟವನ್ನು ಪರಿಗಣಿಸಿಯೇ ಈ ಕುರಿತು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಅವರು ತಿರುಗೇಟು ನೀಡಿದ್ದಾರೆ.

ಡಾ.ಪೌಲ್ ಅವರು ರಾಷ್ಟ್ರೀಯ ಲಸಿಕೆ ಕಾರ್ಯಕ್ರಮದ ತಜ್ಞರ ತಂಡದ (ಎನ್‌ಇಜಿವಿಎ) ಮುಖ್ಯಸ್ಥರೂ ಆಗಿದ್ದಾರೆ.

‘ಫೈಜರ್, ಮೊಡೆರ್ನಾ ಹಾಗೂ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಗಳೊಂದಿಗೆ ಕಳೆದ ವರ್ಷದಿಂದಲೇ ಸರ್ಕಾರ ಮಾತುಕತೆ ಆರಂಭಿಸಿದೆ. ಆದರೆ, ಈ ಕಂಪನಿಗಳ ಆದ್ಯತೆಗಳೇ ಬೇರೆಯಾಗಿವೆ. ಲಸಿಕೆ ವಿತರಣೆಗೆ ಸಂಬಂಧಿಸಿ ತಮ್ಮದೇ ಆದ ಕಟ್ಟುಪಾಡುಗಳನ್ನು ಅವು ಹೊಂದಿವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.