ಬ್ರಸಿಲಿಯಾ: ಅತಿಹೆಚ್ಚು ಸೋಂಕು ಪ್ರಕರಣಗಳು ವರದಿಯಾದ ರಾಷ್ಟ್ರಗಳಸಾಲಿನಲ್ಲಿ 3ನೇ ಸ್ಥಾನದಲ್ಲಿರುವ ಬ್ರೆಜಿಲ್ನಲ್ಲಿ ಕಳೆದ 24ಗಂಟೆಗಳಲ್ಲಿ ಬರೋಬ್ಬರಿ52,789 ಜನರಿಗೆ ಕೋವಿಡ್-19 ದೃಢಪಟ್ಟಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಅದರಂತೆ ಬ್ರೆಜಿಲ್ನಲ್ಲಿ ಈವರೆಗೆ ವರದಿಯಾದ ಸೋಂಕು ಪ್ರಕರಣಗಳ ಸಂಖ್ಯೆ1.92 ಕೋಟಿಗೆ (1,92,62,518) ತಲುಪಿದೆ.

ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಹೊಸದಾಗಿ ದಾಖಲಾದ ಸಾವಿನ ಸಂಖ್ಯೆ1,548 ಆಗಿದೆ. ಸೋಂಕು ಕಾಣಿಸಿಕೊಂಡಾಗಿನಿಂದ ಒಟ್ಟು1.79ಕೋಟಿ (1,79,17,189) ಸೋಂಕಿತರು ಈ ದೇಶದಲ್ಲಿ ಗುಣಮುಖರಾಗಿದ್ದಾರೆ. ಇನ್ನೂ8,13,598 ಸಕ್ರಿಯ ಪ್ರಕರಣಗಳು ಇವೆ.

ಬುಧವಾರ 57,736 ಹೊಸ ಪ್ರಕರಣಗಳು ವರದಿಯಾಗಿ, 1,556 ಮಂದಿ ಮೃತಪಟ್ಟಿದ್ದರು.

ಸಾವಿನ ಸಂಖ್ಯೆಯಲ್ಲಿ ಎರಡನೇ ಸ್ಥಾನ
ಬ್ರೆಜಿಲ್ನಲ್ಲಿ ಈವರೆಗೆ ಒಟ್ಟು5,37,498 ಮಂದಿ ಕೋವಿಡ್ನಿಂದಾಗಿ ಮೃತಪಟ್ಟಿದ್ದಾರೆ. ಅಮೆರಿಕವನ್ನು ಹೊರತುಪಡಿಸಿ ಇಷ್ಟು ಪ್ರಮಾಣದ ಸಾವಿನ ಪ್ರಕರಣಗಳು ಬೇರೆಲ್ಲೂ ವರದಿಯಾಗಿಲ್ಲ.3.48 ಕೋಟಿ (3,48,50,481) ಸೋಂಕು ಪ್ರಕರಣ ಪತ್ತೆಯಾಗಿರುವ ಅಮೆರಿಕದಲ್ಲಿ6,23,856 ಸೋಂಕಿತರು ಮೃತಪಟ್ಟಿದ್ದಾರೆ. ನಾಲ್ಕು ಲಕ್ಷಕ್ಕಿಂತ ಹೆಚ್ಚು ಸಾವುಗಳನ್ನು ಕಂಡಿರುವ ಭಾರತ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ವಿಶ್ವ ಆರೋಗ್ಯ ಸಂಸ್ಥೆಯು2020ರಮಾರ್ಚ್11ರಂದುಕೊರೊನಾವೈರಸ್ ಸೋಂಕನ್ನು ಜಾಗತಿಕ ಪಿಡುಗು ಎಂದು ಘೋಷಿಸಿತ್ತು.

ವರ್ಲ್ಡೋಮೀಟರ್ ವೆಬ್ಸೈಟ್ನ ಪ್ರಕಾರಪ್ರಪಂಚದಾದ್ಯಂತ ಈವರೆಗೆ ಒಟ್ಟು 18.9 ಕೋಟಿ ಜನರಿಗೆ ಸೋಂಕು ತಗುಲಿದ್ದು,40 ಲಕ್ಷಕ್ಕೂ ಹೆಚ್ಚು ಸೋಂಕಿತರು ಮೃತಪಟ್ಟಿದ್ದಾರೆ. ಇನ್ನೂ1.22 ಕೋಟಿಗೂ (1,22,90,591) ಅಧಿಕ ಸಕ್ರಿಯ ಪ್ರಕರಣಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.