ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತ 3,947 ಹೊಸ ಕೋವಿಡ್ ಪ್ರಕರಣಗಳನ್ನು ಕಂಡಿದೆ. ಇದರೊಂದಿಗೆ ದೇಶದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 4,45,87,307 ಕ್ಕೆ ತಲುಪಿದೆ. ಸದ್ಯ ದೇಶದಲ್ಲಿ 39,583 ಸಕ್ರಿಯ ಪ್ರಕರಣಗಳಿವೆ.
ಒಂದು ದಿನದ ಈ ಅವಧಿಯಲ್ಲಿ 18 ಮಂದಿ ಕೋವಿಡ್ ಕಾರಣದಿಂದ ಮೃತಪಟ್ಟಿದ್ದಾರೆ. ಈ ಪೈಕಿ 9 ಸಾವುಗಳು ಕೇರಳದಿಂದಲೇ ವರದಿಯಾಗಿವೆ. ಇದರೊಂದಿಗೆ ಸಾವಿನ ಸಂಖ್ಯೆ 5,28,629 ಕ್ಕೆ ತಲುಪಿದೆ.
ಸದ್ಯ ದೇಶದ ದೈನಂದಿನ ಪಾಸಿಟಿವಿಟಿ ದರವು ಶೇಕಡ 1.23 ರಷ್ಟಿದೆ.
ದೇಶದಲ್ಲಿ ಈವರೆಗೆ ನಡೆದ ಕೋವಿಡ್ ಲಸಿಕೆ ಅಭಿಯಾನದಲ್ಲಿ ಒಟ್ಟು 218.52 ಕೋಟಿ ಡೋಸ್ಗಳನ್ನು ನೀಡಲಾಗಿದೆ.
India records 3,947 new Covid19 cases in the last 24 hours; Active caseload stands at 39,583.