ನವದೆಹಲಿ: 24 ಗಂಟೆಗಳಲ್ಲಿ ದೇಶದಲ್ಲಿ 45,951 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 817 ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ..

ಇದೇ ಅವಧಿಯಲ್ಲಿ 60,729 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.

ಈವರೆಗೆ ದೇಶದಲ್ಲಿ ಒಟ್ಟು 3,03,62,848 ಮಂದಿಕೋವಿಡ್ ಸೋಂಕಿತರಾಗಿದ್ದು, ಒಟ್ಟು 2,94,27,330 ಮಂದಿ ಗುಣಮುಖರಾಗಿದ್ದಾರೆ.

ಕೋವಿಡ್ -19 ರ ಎರಡನೇ ಅಲೆ ತಗ್ಗುತ್ತಿರುವ ಮಧ್ಯೆ, ಸಕ್ರಿಯ ಪ್ರಕರಣಗಳ ಸಂಖ್ಯೆ ಸಹ 5,37,064 ಕ್ಕೆ ಇಳಿದಿದ್ದು, ಚೇತರಿಕೆಯ ಪ್ರಮಾಣ ಶೇಕಡಾ 96.92 ಕ್ಕೆ ತಲುಪಿದೆ. ದೇಶದಾದ್ಯಂತ ಕೋವಿಡ್‌ನಿಂದ ಮೃತಪಟ್ಟ ಸೋಂಕಿತರ ಒಟ್ಟು ಸಂಖ್ಯೆ 3,98,454 ಆಗಿದೆ.

ಈ ಮಧ್ಯೆ, ದೇಶದಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ತಳಿ ಹರಡುತ್ತಿದ್ದು, ಆರೋಗ್ಯ ಇಲಾಖೆ ತೀವ್ರ ಕಟ್ಟೆಚ್ಚರವಹಿಸಿದೆ. ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಯುತ್ತಿದ್ದಂತೆ ಅನೇಕ ರಾಜ್ಯಗಳಲ್ಲಿ ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಿಸಲಾಗುತ್ತಿದ್ದು, ಡೆಲ್ಟಾ ಪ್ಲಸ್ ಹರಡುವಿಕೆ ಬಗ್ಗೆ ಎಚ್ಚರಿಕೆ ವಹಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ದೇಶದಾದ್ಯಂತ ಈವರೆಗೆ 33,28,54,527 ಡೋಸ್ ಲಸಿಕೆ ವಿತರಣೆ ಆಗಿದ್ದು, ಲಸಿಕೆ ವಿತರಣೆ ಸಂಖ್ಯೆಯಲ್ಲಿ ಈಗ ಭಾರತವು ಅಮೆರಿಕವನ್ನು ಹಿಂದಿಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.