ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ –19 | ದೇಶದಲ್ಲಿ 511 ಮಂದಿಗೆ JN.1 ಸೋಂಕು: ಕರ್ನಾಟಕದಲ್ಲೇ ಹೆಚ್ಚು

Published 3 ಜನವರಿ 2024, 9:23 IST
Last Updated 3 ಜನವರಿ 2024, 9:23 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಈವರೆಗೆ ಒಟ್ಟು 511 ಮಂದಿಗೆ ಕೊರೊನಾ ವೈರಸ್‌ ಉಪತಳಿ JN.1 ಸೋಂಕು ತಗುಲಿದೆ. ಅದರಲ್ಲಿ ಅತಿ ಹೆಚ್ಚು ಸೋಂಕಿತರು ಕರ್ನಾಟಕದಲ್ಲಿದ್ದಾರೆ.

ಕರ್ನಾಟಕದಲ್ಲಿ 199 ಜನರಿಗೆ JN.1 ಸೋಂಕು ತಗುಲಿದೆ. ಕೇರಳದಲ್ಲಿ 148, ಗೋವಾದಲ್ಲಿ 47, ಗುಜರಾತ್‌ನಲ್ಲಿ 36, ಮಹಾರಾಷ್ಟ್ರದಲ್ಲಿ 32, ತಮಿಳುನಾಡಿನಲ್ಲಿ 26, ದೆಹಲಿಯಲ್ಲಿ 15, ರಾಜಸ್ಥಾನದಲ್ಲಿ 4, ತೆಲಂಗಾಣದಲ್ಲಿ ಇಬ್ಬರಿಗೆ ಹಾಗೂ ಒಡಿಶಾ ಮತ್ತು ಹರಿಯಾಣದಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ.

ಈಗಾಗಲೇ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಕೊರೊನಾ ರೂಪಾಂತರಿ ಹರಡುವುದನ್ನು ತಡೆಯುವ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT