ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid–19 | ದೇಶದಲ್ಲಿ 827 ಜೆಎನ್‌.1 ಪ್ರಕರಣ ವರದಿ

Published 11 ಜನವರಿ 2024, 11:28 IST
Last Updated 11 ಜನವರಿ 2024, 11:28 IST
ಅಕ್ಷರ ಗಾತ್ರ

ನವದೆಹಲಿ: ದೇಶದ 12 ರಾಜ್ಯಗಳಲ್ಲಿ ಕೋವಿಡ್‌ ವೈರಾಣುವಿನ ಹೊಸ ಉಪತಳಿ ಜೆನ್‌.1 ಪ್ರಕರಣ ವರದಿಯಾಗಿದ್ದು, ಇಲ್ಲಿಯವರೆಗೆ ಒಟ್ಟು 827 ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಹೆಚ್ಚು ಪ್ರಕರಣಗಳು ಕಂಡುಬಂದಿದ್ದು, 250 ಪ್ರಕರಣಗಳು ವರದಿಯಾಗಿವೆ. ಕರ್ನಾಟಕದಲ್ಲಿ 199, ಕೇರಳದಲ್ಲಿ 155, ಗೋವಾದಲ್ಲಿ 49, ಗುಜರಾತ್‌ನಲ್ಲಿ 36, ಆಂಧ್ರ ಪ್ರದೇಶದಲ್ಲಿ 30, ರಾಜಸ್ಥಾನದಲ್ಲಿ 30, ತಮಿಳುನಾಡು ಮತ್ತು ತೆಲಂಗಾಣದಲ್ಲಿ 26, ರಾಜಧಾನಿ ದೆಹಲಿಯಲ್ಲಿ 22, ಒಡಿಶಾದಲ್ಲಿ 3 ಮತ್ತು ಹರ್ಯಾಣದಲ್ಲಿ 1 ಪ್ರಕರಣ ವರದಿಯಾಗಿದೆ.

ದೇಶದಲ್ಲಿ ಕೋವಿಡ್ ಉಪತಳಿಯ ಪ್ರಕರಣಗಳು ಹೆಚ್ಚು ವರದಿಯಾಗಿದ್ದರೂ ಆತಂಕಪಡುವ ಯಾವುದೇ ಅಂಶ ಕಂಡುಬಂದಿರಲಿಲ್ಲ. ಸೋಂಕಿತರಲ್ಲಿ ಹೆಚ್ಚಿನವರು ಮನೆ ಆರೈಕೆ ಆರಿಸಿಕೊಂಡಿದ್ದು, ಗುಣಮುಖರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿಡ್ ಉಪತಳಿಯ ಪ್ರಕರಣಗಳು ವರದಿಯಾಗುತ್ತಿದ್ದಂತೆ ಹೆಚ್ಚಿನ ನಿಗಾ ವಹಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ, ರಾಜ್ಯಗಳಿಗೆ ತಿಳಿಸಿತ್ತು. ಅಲ್ಲದೇ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುವಂತೆ ತಿಳಿಸಿತ್ತು. ಜಿಲ್ಲಾವಾರು ವರದಿ ಮಾಡುವಂತೆಯೂ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT