ಪಿಟಿಐ

ನವದೆಹಲಿ: ಕೋವಿಡ್–19 ಲಸಿಕೆ ತಯಾರಿಕರಿಗೆ ಸರ್ಕಾರ ನೀಡಿರುವ ಅನುದಾನದ ಕುರಿತು ‘ದತ್ತಾಂಶ ಲಭ್ಯವಿಲ್ಲ’ ಎಂಬುದಕ್ಕೆ ಸಂಬಂಧಿಸಿ ಪ್ರಮಾಣಪತ್ರ ಸಲ್ಲಿಸುವಂತೆ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಗೆ ಕೇಂದ್ರ ಮಾಹಿತಿ ಆಯೋಗವು ನಿರ್ದೇಶನ ನೀಡಿದೆ.

ಮಹಾವೀರ್ ಸಿಂಗ್ ಶರ್ಮಾ ಅವರು ಮಾಹಿತಿ ಹಕ್ಕು (ಆರ್ಟಿಐ) ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಈ ನಿರ್ದೇಶನ ನೀಡಿದೆ.

ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಕಂಪನಿಗಳಿಗೆ ಕೋವಿಡ್–19 ಲಸಿಕೆ ಉತ್ಪಾದನೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ ಸಾವಿರಾರು ಕೋಟಿ ರೂಪಾಯಿ ಬಗ್ಗೆ ವಿವರಣೆ ಕೇಳಿ ಮಹಾವೀರ್ ಅವರು ಅರ್ಜಿ ಸಲ್ಲಿಸಿದ್ದರು. ‘ಕೇಳಿರುವ ಮಾಹಿತಿಯು ಇಲಾಖೆಯ ಲಾಜಿಸ್ಟಿಕ್ ವಿಭಾಗದ ಬಳಿ ಇಲ್ಲ’ ಎಂದು ಆರ್ಟಿಐ ಅರ್ಜಿಗೆ ಉತ್ತರಿಸಲಾಗಿತ್ತು.

‘ಇಲಾಖೆ ಬಳಿ ದತ್ತಾಂಶ ಲಭ್ಯವಿಲ್ಲ’ ಎಂಬುದನ್ನು ಪ್ರಮಾಣಪತ್ರದ ಮೂಲಕ ಸಲ್ಲಿಸುವಂತೆ ಕೇಂದ್ರ ಮಾಹಿತಿ ಆಯೋಗದ ಮಾಹಿತಿ ಆಯುಕ್ತ ಆಯುಕ್ತ ಖುಶ್ವಂತ್ ಸಿಂಗ್ ಸೇಥಿ ಆದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.