ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತ್ರಿಪುರಾ | ಸಿಪಿಐ(ಎಂ) ಸದಸ್ಯರ ಸಂಖ್ಯೆ 37 ಸಾವಿರಕ್ಕೆ ಇಳಿಕೆ: ಜಿತೇಂದ್ರ ಚೌಧರಿ

Published : 22 ಸೆಪ್ಟೆಂಬರ್ 2024, 13:52 IST
Last Updated : 22 ಸೆಪ್ಟೆಂಬರ್ 2024, 13:52 IST
ಫಾಲೋ ಮಾಡಿ
Comments

ಅಗರ್ತಲಾ: 2018ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ತ್ರಿಪುರಾದಲ್ಲಿ ಸಿಪಿಐ(ಎಂ) ಪಕ್ಷ 60 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಕಳೆದುಕೊಂಡಿದೆ ಎಂದು ತ್ರಿಪುರಾ ಸಿಪಿಐ(ಎಂ) ಕಾರ್ಯದರ್ಶಿ ಜಿತೇಂದ್ರ ಚೌಧರಿ ಹೇಳಿದ್ದಾರೆ.

ಗೋಮತಿ ಜಿಲ್ಲೆಯ ಉದಯಪುರದಲ್ಲಿ ಇತ್ತೀಚೆಗೆ ನಿಧನರಾದ ಸೀತಾರಾಮ್ ಯೆಚೂರಿ ಅವರ ನೆನಪಿಗಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

2018ರ ವಿಧಾನಸಭಾ ಚುನಾವಣೆಗೆ ಮೊದಲು ಪಕ್ಷವು 98 ಸಾವಿರ ಸದಸ್ಯರನ್ನು ಹೊಂದಿತ್ತು. ಇದೀಗ 37 ಸಾವಿರಕ್ಕೆ ಇಳಿಕೆಯಾಗಿದೆ. 2018ರಲ್ಲಿ ನಾವು ಅಧಿಕಾರ ಉಳಿಸಿಕೊಂಡಿದ್ದರೇ ಈ ವೇಳೆಗೆ 1.50 ಲಕ್ಷ ಸದಸ್ಯರನ್ನು ಹೊಂದಿರಬಹುದಿತ್ತು ಎಂದು ಅವರು ಹೇಳಿದರು.

ಪಕ್ಷಕ್ಕೆ ಸದಸ್ಯರು ಕಡಿಮೆಯಾಗಿರುವುದು ಮುಖ್ಯವಲ್ಲ, ಆದರೆ ಪಕ್ಷದ ಕಾರ್ಯಕ್ರಮಗಳಿಗೆ ಕಾರ್ಯಕರ್ತರು ಏಕೆ ಸಕ್ರಿಯವಾಗಿ ಸೇರುತ್ತಿಲ್ಲ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಚೌಧರಿ ಹೇಳಿದರು

1978ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಪಕ್ಷ 56 ಸ್ಥಾನಗಳನ್ನು ಗೆದ್ದಾಗ ಸಿಪಿಐ(ಎಂ) ಕೇವಲ 6,500 ಜನ ಸದಸ್ಯರನ್ನು ಹೊಂದಿತ್ತು. ಇದೀಗ ಜನರು ಬಿಜೆಪಿ ಸರ್ಕಾರದ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಿರುವುದು ಪಕ್ಷಕ್ಕೆ ಒಂದು ಸುವರ್ಣಾವಕಾಶ ಬಂದಂತಾಗಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT