ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾರಾಷ್ಟ್ರ ಚುನಾವಣೆ: ಜಾಹೀರಾತಿನಲ್ಲಿ CM ಶಿಂದೆ ಹೆಸರು ಬಿಟ್ಟಿದ್ದಕ್ಕೆ ಆಕ್ಷೇಪ

ಮಹಾಯುತಿಯಲ್ಲಿ ಬಿರುಕು
Published : 6 ಸೆಪ್ಟೆಂಬರ್ 2024, 15:50 IST
Last Updated : 6 ಸೆಪ್ಟೆಂಬರ್ 2024, 15:50 IST
ಫಾಲೋ ಮಾಡಿ
Comments

ಮುಂಬೈ: ಮಹಾರಾಷ್ಟ್ರ ಆಡಳಿತರೂಢ ‘ಮಹಾಯುತಿ’ ಮೈತ್ರಿ ಒಕ್ಕೂಟದಲ್ಲಿ ಬಿರುಕು ಕಾಣಿಸಿಕೊಂಡಿದೆ.

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಲಡ್ಕಿ ಬಹೀನ್‌ ಯೋಜನೆ’ಯ ಪ್ರಚಾರದ ಕರಪತ್ರ ಹಾಗೂ ಜಾಹೀರಾತುಗಳಲ್ಲಿ ಮುಖ್ಯಮಂತ್ರಿ ಏಕನಾಥ ಶಿಂದೆ ಹೆಸರು ಕೈ ಬಿಟ್ಟಿರುವುದಕ್ಕೆ ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿ ವಿರುದ್ಧ ಶಿವಸೇನಾ ಮುಖಂಡ ಹಾಗೂ ಅಬಕಾರಿ ಸಚಿವ ಶಂಭುರಾಜ್‌ ದೇಸಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ರಾಜ್ಯದ ಪ್ರತಿ ಮಹಿಳೆಗೂ ಮಾಸಿಕ ₹1,500 ವಿತರಿಸುವ ‘ಮುಖ್ಯಮಂತ್ರಿ ಲಡ್ಕಿ ಬಹೀನ್‌ ಯೋಜನೆ’ಯ ಸಾಧನೆಯನ್ನು ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ತಮ್ಮದೆಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಸಾರ್ವಜನಿಕ ಸಮಾರಂಭಗಳಲ್ಲಿ ಯೋಜನೆಯ ಪೂರ್ಣ ಹೆಸರು ಬಳಸುತ್ತಿಲ್ಲ. ಆದರೆ, ಯೋಜನೆಯು ‘ಮುಖ್ಯಮಂತ್ರಿ’ ಎಂಬುದನ್ನು ಒಳಗೊಂಡಿದೆ. ಅದನ್ನು ಕೈ ಬಿಟ್ಟಿರುವುದು ಸರಿಯಲ್ಲ. ಇಂತಹ ಬೆಳವಣಿಗೆಯೂ ಒಳ್ಳೆಯದಲ್ಲ’ ಎಂದು ತಿಳಿಸಿದ್ದಾರೆ.

‘ಇದು ರಾಜ್ಯ ಸರ್ಕಾರದ ಯೋಜನೆಯಾಗಿದ್ದು, ಪವಾರ್‌ ಅವರು ಎಲ್ಲರನ್ನೂ ಜತೆಗೆ ಕರೆದೊಯ್ಯಬೇಕು’ ಎಂದು ಒತ್ತಾಯಿಸಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್‌ನಲ್ಲಿ ಚುನಾವಣೆ ನಡೆಯಲಿದ್ದು, ಹಣಕಾಸು ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರು ಕಳೆದೊಂದು ತಿಂಗಳಿನಿಂದ ರಾಜ್ಯದಾದ್ಯಂತ ‘ಜನ್‌ ಸಮ್ಮಾನ್‌ ಯಾತ್ರೆ’ ಹಮ್ಮಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT