ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋವಿಡ್ ಕಾಲದಲ್ಲಿ ಅಪರಾಧ ಇಳಿಕೆ

ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯೂರೊ ವರದಿ 2020; ಅಸಹಕಾರ ಪ್ರಕರಣ ದಾಖಲೆ ಏರಿಕೆ
Published : 15 ಸೆಪ್ಟೆಂಬರ್ 2021, 17:04 IST
ಫಾಲೋ ಮಾಡಿ
Comments

ನವದೆಹಲಿ: ಕೋವಿಡ್‌ ಸಾಂಕ್ರಾಮಿಕ ಮತ್ತು ನಂತರದ ಲಾಕ್‌ಡೌನ್‌ನಲ್ಲಿ ಸಾಂಪ್ರದಾಯಿಕ ಅಪರಾಧಗಳಾದಮಹಿಳೆಯರು ಮತ್ತು ಮಕ್ಕಳ ಮೇಲಿನ ಹಲ್ಲೆ, ಕಳ್ಳತನ, ದರೋಡೆಯಂತಹ ಪ್ರಕರಣಗಳು ಇಳಿಕೆಯಾಗಿವೆ. ಆದರೆ ಕೋವಿಡ್ ನಿಯಮಾವಳಿಗಳು ಸೇರಿದಂತೆ ಸರ್ಕಾರದ ಆದೇಶಗಳನ್ನು ಧಿಕ್ಕರಿಸಿ, ಅಸಹಕಾರ ತೋರುವ ಪ್ರಕರಣಗಳು ಹೆಚ್ಚಾಗಿವೆ.

ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯೂರೊ (ಎನ್‌ಸಿಆರ್‌ಬಿ) 2020ರ ವರದಿ ಪ್ರಕಾರ, ಭಾರತೀಯ ದಂಡಸಂಹಿತೆಯ (ಐಪಿಸಿ) 42 ಲಕ್ಷ ಅಪರಾಧಗಳು, ವಿಶೇಷ ಹಾಗೂ ಸ್ಥಳೀಯ ಕಾನೂನುಗಳಿಗೆ (ಎಸ್‌ಎಲ್‌ಎಲ್‌) ಸಂಬಂಧಿಸಿದ 23 ಲಕ್ಷ ಅಪರಾಧಗಳು ಸೇರಿ ಒಟ್ಟು 66 ಲಕ್ಷ ಪ್ರಕರಣಗಳು ಕಳೆದ ವರ್ಷ ವರದಿಯಾಗಿವೆ.

ಸರ್ಕಾರಿ ಆದೇಶಗಳಿಗೆ ಅವಿಧೇಯತೆ ತೋರಿದ ಆರೋಪದಲ್ಲಿ ದಾಖಲಾದ ಪ್ರಕರಣಗಳಲ್ಲಿ ದಾಖಲೆಯ ಹೆಚ್ಚಳ ಕಂಡುಬಂದಿದೆ. 2019ರಲ್ಲಿ 29,469 ಪ್ರಕರಣಗಳಿದ್ದವು. ಇವುಗಳ ಪ್ರಮಾಣ 2020ರಲ್ಲಿ 6,12,179 ಪ್ರಕರಣಗಳಿಗೆ ಏರಿಕೆಯಾಗಿದೆ. ‘ಇತರ ಐಪಿಸಿ ಅಪರಾಧ’ಗಳ ಅಡಿಯಲ್ಲಿ2019ರಲ್ಲಿ 2,52,268 ಇದ್ದ ಪ್ರಕರಣಗಳ ಸಂಖ್ಯೆ 2020ರಲ್ಲಿ 10,62,399ಕ್ಕೆ ಏರಿಕೆ ಕಂಡಿದೆ ಎಂದು ವರದಿ ಹೇಳಿದೆ.

ಅದೇ ರೀತಿ, ಎಸ್‌ಎಲ್‌ಎಲ್‌ ವರ್ಗದಡಿ ಇತರೆ ರಾಜ್ಯಗಳ ಸ್ಥಳೀಯ ಕಾಯ್ದೆಗಳ ಅಡಿಯಲ್ಲಿ 2019ರಲ್ಲಿ89,553 ಪ್ರಕರಣ ವರದಿಯಾಗಿದ್ದವು. ಇವುಗಳ ಸಂಖ್ಯೆ 2020ರಲ್ಲಿ4,14,589ಕ್ಕೆ ತಲುಪಿದೆ.ಇವೆಲ್ಲವೂ ಬಹುತೇಕ ಕೋವಿಡ್ ನಿಯಮಾವಳಿ ಉಲ್ಲಂಘಿಸಿದ ಪ್ರಕರಣಗಳು. ಹೀಗಾಗಿಯೇ ಸಾಂಪ್ರದಾಯಿಕ ಪ್ರಕರಣಗಳಲ್ಲಿ ಸುಮಾರು 2 ಲಕ್ಷದಷ್ಟು ಇಳಿಕೆ ಕಂಡುಬಂದಿದೆ.

ಹಿಂದಿನ ವರ್ಷದಿಂದ ಬಾಕಿ ಉಳಿದಿರುವ 13,27,167 ಪ್ರಕರಣಗಳು, 2020ರಲ್ಲಿ ವರದಿಯಾದ 42,54,356 ಪ್ರಕರಣಗಳು ಮತ್ತು 2,612 ತನಿಖೆಗೆ ಪುನಃ ತೆರೆಯಲ್ಪಟ್ಟಪ್ರಕರಣಗಳು ಸೇರಿ ಒಟ್ಟು55,84,135 ಐಪಿಸಿ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಈ ಪೈಕಿ 34,47,285 ಪ್ರಕರಣಗಳನ್ನು ಪೊಲೀಸರು ವಿಲೇವಾರಿ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.

ಕೋವಿಡ್ ಮೊದಲ ಅಲೆಯಿದ್ದ ಮಾರ್ಚ್ 25ರಿಂದ ಮೇ 31ರ ಅವಧಿಯಲ್ಲಿ ಸಂಪೂರ್ಣ ಲಾಕ್‌ಡೌನ್‌ನಲ್ಲಿ ಇತ್ತು. ಹೀಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಜನರ ಸಂಚಾರ ಬಹಳ ಸೀಮಿತವಾಗಿತ್ತು.ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರ ವಿರುದ್ಧದ ಅಪರಾಧಗಳು, ಕಳ್ಳತನ, ದರೋಡೆ ಮತ್ತು ದೌರ್ಜನ್ಯದ ಅಡಿಯಲ್ಲಿ ದಾಖಲಾದ ಪ್ರಕರಣಗಳು ಕಡಿಮೆಯಾಗಿವೆ ಎಂದು ವರದಿ ಅಭಿಪ್ರಾಯಪಟ್ಟಿದೆ.

ಪ್ರಕರಣಗಳ ಪ್ರಮಾಣ

2019ರಲ್ಲಿ 51.56 ಲಕ್ಷದಷ್ಟಿದ್ದ ಪ್ರಕರಣಗಳು 2020ರಲ್ಲಿ 66 ಲಕ್ಷಕ್ಕೆ ಏರಿಕೆಯಾಗಿವೆ. 2019ಕ್ಕೆ ಹೋಲಿಸಿದರೆ, ಐಪಿಸಿ ಸೆಕ್ಷನ್‌ ಅಡಿ ದಾಖಲಾದ ಪ್ರಕರಣಗಳ ಪ್ರಮಾಣ ಶೇ 31.9ರಷ್ಟು ಹೆಚ್ಚಳವಾಗಿದೆ. ಹಾಗೆಯೇ, 2019ಕ್ಕೆ ಹೋಲಿಸಿದರೆ, ಎಸ್‌ಎಲ್‌ಎಲ್‌ ಅಡಿ ದಾಖಲಾದ ಪ್ರಕರಣಗಳ ಪ್ರಮಾಣ ಶೇ 21.6ರಷ್ಟು ಏರಿಕೆ ಕಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT